ಬೆÉೀಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಅಭಿಯಾನ

ಗುರುಮಠಕಲ:ಜ.25: ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ. . ತಾಲೂಕ ಆಡಳಿತ. ತಾಲೂಕ ಪಂಚಾಯತ್ ಗುರುಮಠಕಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು. ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಯುಕ್ತ ಆಶ್ರಯದಲ್ಲಿ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ** ಭೇಟಿ ಬಚಾವೋ ಬೇಟಿ ಪಡಾವೋ** ಅಭಿಯಾನ ಹಾಗೂ ತಾಲೂಕ ಮಟ್ಟದ ಜಾಗೃತಿ ಜಾತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗುರುಮಠಕಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶರಣಬಸಪ್ಪ ಅವರು ಮಾತನಾಡಿ. ಪ್ರತಿಯೊಬ್ಬ ಮಹಿಳೆಯು ಒಳ್ಳೆಯ ವಿದ್ಯಾಭ್ಯಾಸ ಮಾಡಿದಾಗ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ. ಬಾಲಾಕಾರ್ಮಿಕ ಪದ್ಧತಿಗಳನ್ನು ತಡೆಯಬಹುದಾಗಿದೆ ಮತ್ತು ಶಾಲಾ ಬಿಡುವಿಕೆಯನ್ನು ಕಡಿಮೆ ಮಾಡಬಹುದು. ಇದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಗಳಾದರೆ 1 0 9 8 ಅಥವಾ 112 ಗೆ ಕರೆ ಮಾಡಬಹುದು. ಇದರಿಂದ ವಿವಿಧ ಇಲಾಖೆ ಎಲ್ಲಾ ಅಧಿಕಾರಿಗಳು ಅಂತಹ ಮಕ್ಕಳನ್ನು ರಕ್ಷಣೆ ಮಾಡಬಹುದು ಎಂದು ತಿಳಿಸಿದರು. ಗುರುಮಠಕಲ್ ಪಟ್ಟಣದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ವೀರಮ್ಮ ಇವರು ಮಾತನಾಡುತ್ತಾ ಹೆಣ್ಣು ಮಕ್ಕಳ ಶಿಕ್ಷಣ ಮಹತ್ವದ ಕುರಿತು ಹೆಣ್ಣು ಮಕ್ಕಳ ಲಿಂಗ ಸಮಾನತೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನ ಮಾನ ಕುರಿತು ತಿಳಿಸಿದರು. ನೌಕರರ ಸಂಘದ ಉಪಾಧ್ಯಕ್ಷ ಆಂಜನೇಯ ಸಹ ಶಿಕ್ಷಕರು ಮಾತನಾಡುತ್ತ ಬಾಲ್ಯ ವಿವಾಹದಿಂದ ದುಷ್ಪರಿಣಾಮಗಳು ಹಾಗೂ ಅದನ್ನು ತಡೆಯುವ ಕ್ರಮದ ಬಗ್ಗೆ ಹಾಗೂ ಹೆಣ್ಣು ಮಕ್ಕಳ ಸಮಾನತೆ ಕುರಿತು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿಯರಾದ ಶ್ರೀಮತಿ ಶರಣಮ್ಮ ಮಾತನಾಡಿ ಹೆಣ್ಣು ಮಕ್ಕಳು ತಮ್ಮ ಹಕ್ಕುಗಳ ಕುರಿತು ಜಾಗೃತರಾಗಬೇಕು ಮತ್ತು ಹೆಣ್ಣು ಮಕ್ಕಳ ಶಿಕ್ಷಣ. ಹೆಣ್ಣು ಬ್ರೂಣ ಹತ್ಯೆಯನ್ನು ತಡೆಯುವುದು ಮತ್ತು ಹೆಣ್ಣು ಮಕ್ಕಳ ಲಿಂಗ ತಾರತಮ್ಯ ಹೋಗಲಾಡಿಸಲು ಮತ್ತು ಮಹಿಳಾ ಸಬಲೀಕರಣ ಕ್ಕಾಗಿ ಭೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು .ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಶರಣಪ್ಪ. ಲಿಂಗಾನಂದ ಗೋಗಿ. ಈರಪ್ಪ. ಅಲ್ಲಿ ಮೌಲಾನ. ಮಲ್ಲಿಕಾರ್ಜುನ. ಹೇಮಲತಾ. ಬಾಲಮಣಿ. ಸಂತೋಷ್. ಭಾಗ್ಯಲಕ್ಷ್ಮಿ. ರಾಮಲಿಂಗಮ್ಮ. ಹಾಗೂ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿಯರಾದ ರೇಣುಕಾ. ಗೌರಮ್ಮ. ಪುಷ್ಪ ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಮಕ್ಕಳು ಉಪಸ್ಥಿತರಿದ್ದರು.