ಬೆಸ್ಟ್ ಸಂಸ್ಥೆಯಿಂದ ಪೊಲೀಸರಿಗೆ ಫೇಸ್‍ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಬಳ್ಳಾರಿ, ಜೂ.10: ನಗರದ ಪ್ರಸಿದ್ದ ಶಿಕ್ಷಣ ಸಂಸ್ಥೆ ಬೆಸ್ಟ್‍ನಿಂದ ನಿನ್ನೆ ನಗರದಲ್ಲಿನ ಪೊಲೀಸರಿಗೆ ಮಾಸ್ಕ್, ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸರ್‍ನ್ನು ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ನಗರದ 10 ವಾರ್ಡಿನ ಕಾಪೊರೇಟರ್ ಕೋನಂಕಿ ತಿಲಕ್ ಅವರು ವಿತರಿಸಿದರು.
ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ನಗರದ ಡಿವೈಎಸ್ಪಿ ರಾಮೇಶ್ ಕುಮಾರ್ ಅವರ ಸಮ್ಮುಖದಲ್ಲಿ ಪೊಲೀಸ್ ಸಿಬ್ಬಂದಿಗೆ ಇವನ್ನು ತರಿಸಲಾಯಿತು.
ಮಹಾಮಾರಿ ಕರೋನವನ್ನು ಹಿಮ್ಮೆಟ್ಟಿಸಲು ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಪೇದೆಗಳು ಸೇನಾನಿಗಳಾಗಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಸೋಂಕಿನಿಂದ ಸುರಕ್ಷತೆ ಪಡೆಯಲು ಮಾಸ್ಕ್, ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳು ಅವರ್ಶಯ ಎಂದು ವಿತರಿಸಲಾಗುತ್ತಿರುವುದಾಗಿ ತಿಲಕ್ ಹೇಳಿದ್ದಾರೆ.