ಬೆಸ್ಟ್ ಸಂಸ್ಥೆಯಲ್ಲಿ ‘ ಕ್ಯಾನ್ಸರ್ ಅರಿವು’ ಕಾರ್ಯಕ್ರಮ.


ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17:  ಜಿಲ್ಲೆಯ ಪ್ರತಿಷ್ಠಿತ ಬೆಸ್ಟ್ ಸಂಸ್ಥೆಯಲ್ಲಿ  ಲಯನ್ಸ್ ಕ್ಲಬ್ , ಕಂಟೋನ್ಮೆಂಟ್ ಬಳ್ಳಾರಿ ಇವರು ವಿದ್ಯಾರ್ಥಿಗಳಿಗೆ ಆಯೋಜಿಸಿದ ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಖ್ಯಾತ ವೈದ್ಯರಾದ ಡಾ|| ಮಾಣಿಕ್ ರಾವ್ ಕುಲಕರ್ಣಿ ಚಾಲನೆ ನೀಡಿ ಮಕ್ಕಳಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದರು . ಕ್ಯಾನ್ಸರ್ ಅನ್ನು ತಡೆಗಟ್ಟಲು ಉತ್ತಮ ಪರಿಸರ, ಉತ್ತಮ ಹವ್ಯಾಸ, ಉತ್ತಮ ಜೀವನಶೈಲಿ ಆಹಾರ ಪದ್ದತಿ ಅಳವಡಿಸಿಕೊಳ್ಳುವುದರಿಂದ ಕ್ಯಾನ್ಸರ್ ಖಾಯಿಲೆಯನ್ನು ಗಣನೀಯವಾಗಿ ತಡೆಗಟ್ಟಬಹುದು ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಮನ್ನೆ ಶ್ರೀನಿವಾಸುಲು ವಹಿಸಿ ಆರೋಗ್ಯಕರ ಆಹಾರ ಪದ್ದತಿ ಅಳವಡಿಸಿಕೊಳ್ಳುವುದರಿಂದ ಕ್ಯಾನ್ಸರ್ ಖಾಯಿಲೆಯನ್ನು ಗಣನೀಯವಾಗಿ ತಡೆಗಟ್ಟಬಹುದು  ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರು ರಾಜೇಶ್ ಎಂ.ಪಿ , ಕಾರ್ಯದರ್ಶಿಗಳಾದ ಶ್ರೀ ಜಿ. ಶ್ರೀನಿವಾಸ ರೆಡ್ಡಿ , ಸದಸ್ಯರು ಡಾ|| ರಾಧಾಕೃಷ್ಣ , ಶ್ರೀಲತಾ ರಾವ್ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ|| ಮಾಣಿಕ್ ರಾವ್ ಅವರನ್ನು ಕ್ಲಬ್ ನ ಪರವಾಗಿ ಸನ್ಮಾನಿಸಲಾಯಿತು.  ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಮಲ್ಲಿಕಾರ್ಜುನ ಮಠಪತಿ ಕಾರ್ಯಕ್ರಮವನ್ನು ನಿರೂಪಿಸಿದರು.