ಬೆಸ್ಟ್’ ಶಿಕ್ಷಣ ಸಂಸ್ಥೆ ಉತ್ತರ ಕರ್ನಾಟಕ ಭಾಗದಲ್ಲೇ ಬೆಸ್ಟ್:  ಶ್ರೀರಾಮುಲು


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜ,8- ಬಳ್ಳಾರಿ ಎಜ್ಯುಕೇಶನಲ್ ಸರ್ವಿಸ್‌ ಟ್ರಸ್ಟ್ (ಬೆಸ್ಟ್ ) ನ ಸಂಸ್ಥಾಪಕ ಅಧ್ಯಕ್ಷ ಕೋನಂಕಿ ರಾಮಪ್ಪ ಅವರು ಹಣ ಮಾಡಲು ಟ್ರಸ್ಟ್ ನ್ನು  ಸ್ಥಾಪಿಸಿಲ್ಲ, ಎಲ್ಲ ವರ್ಗದವರಿಗೂ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು ಎಂದು ಸಂಕಲ್ಪ ಮಾಡಿದ್ದಾರೆ, ಉ.ಕ.ಭಾಗದಲ್ಲೇ ಬೆಸ್ಟ್ ಸಂಸ್ಥೆ ಬೆಸ್ಟ್ ಆಗಿದೆ ಎಂದು ಸಾರಿಗೆ  ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಅವರು ನಿನ್ನೆ ಸಂಜೆ
ನಗರದ ಹೊರವಲಯದ ಬೆಸ್ಟ್ ಶಾಲೆ, ಕಾಲೇಜಿನ 20ನೇ ವರ್ಷದ ವಾರ್ಷಿಕೋತ್ಸವ  ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.  ಶಿಕ್ಷಣಕ್ಕೆ ಜಾತಿ, ಬೇದವಿಲ್ಲ, ಬಡವ ಎನ್ನುವ ಮಾತೇ ಇಲ್ಲ, ಶಿಕ್ಷಣ ಎನ್ನುವುದು ಯಾರೂ ಕಸಿದುಕೊಳ್ಳುವ ವಸ್ತುವಲ್ಲ, ಪ್ರತಿಯೋಬ್ಬ ಮಕ್ಕಳೂ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು, ಮಕ್ಕಳು ಮೊಬೈಲ್, ಫೇಸ್ ಬುಕ್, ವ್ಯಾಟ್ಸ್ ಅಪ್, ಟ್ವಿಟರ್, ಬಳಕೆ ಕಡಿಮೆ ಮಾಡಿ ಅಭ್ಯಾಸದ ಕಡೆ ಗಮನಹರಿಸಬೇಕು ಎಂದರು.
ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಬೆಸ್ಟ್ ಶಾಲೆ ಶೇ.99 ರಷ್ಟು ಫಲಿತಾಂಶ ಪಡೆಯುವ ಮೂಲಕ ಕ.ಕ.ಭಾಗದಲ್ಲೇ ಬೆಸ್ಟ್ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಣ  ಎಂಬುವುದು ಯಾರೂ ಕಸಿದುಕೊಳ್ಳುವ ವಸ್ತುವಲ್ಲ, ಪ್ರತಿಯೋಬ್ಬರೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. 20ನೇ ವರ್ಷವನ್ನು ಆಚರಿಸಿಕೊಳ್ಳುತ್ತಿರುವ ಈ ಟ್ರಸ್ಟ್ 100ನೇ ವರ್ಷದ ಸಂಭ್ರಮವನ್ನು ಆಚರಿಸಿ ರಾಜ್ಯದಲ್ಲೇ ಮಾದರಿಯಾಗಲಿ ಎಂದು ಹಾರೈಸಿದರು. ಬೆಸ್ಟ್ ಸಂಸ್ಥೆಯ ಸಂಸ್ಥಾಪಕ ಅದ್ಯಕ್ಷ ಕೊನಂಕಿ ರಾಮಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಡಿಡಿಪಿಐ ಅಂದಾನಪ್ಪ ವಡಗೇರಿ ಸೇರಿದಂತೆ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೋನಂಕಿ ತಿಲಕ್ ಕುಮಾರ್, ಕಾರ್ಯದರ್ಶಿ ಮನ್ನೆ ಶ್ರೀನಿವಾಸಲು, ರಾಮರಾಯಡು,ಬಿಇಒ ಆರ್.ವೆಂಕಟೇಶ, ಮಾಜಿ ಸಂಸದೆ ಜೆ.ಶಾಂತಾ, ಬೂಡಾ ಅದ್ಯಕ್ಷ ಮಾರುತಿ ಪ್ರಸಾದ್, ಖಾಸಗಿ ಶಾಲೆ ಆಡಳಿತ ಮಂಡಳಿ ಅದ್ಯಕ್ಷ ಮರಿಸ್ವಾಮೀ ರೆಡ್ಡಿ, ಕಾಲೇಜು ಪ್ರಾಚಾರ್ಯ ಕೆ.ವೆಂಕಟೇಶ್ವರ, ಉಪ ಪ್ರಾಚಾರ್ಯ ಶ್ರೀನಿವಾಸ್ ರೆಡ್ಡಿ, ಶಾಲೆಯ ಮುಖ್ಯಸ್ಥರು ವಿಜಯಲಕ್ಷ್ಮಿ, ಅರುಣ, ರತ್ನ, ಲೋಕಪ್ಪ ಹಾಗೂ ಪಾಲನ್ನ, ವಿ.ಕೆ.ಬಸಪ್ಪ, ಮುರಹರಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಂತ್ರಾಲಯದ  ಪೀಠಾಧಿಪತಿ  ಸುಬುದಯೇಂದ್ರ ತೀರ್ಥ ಸ್ವಾಮೀಜಿಯವರು ಬೆಸ್ಟ್ ಸಂಸ್ಥೆಗೆ ಆಗಮಿಸಿ  ಬೆಸ್ಟ್ ಕಲಾಕ್ಷೇತ್ರವನ್ನು ಉದ್ಘಾಟಿಸಿ ಮಕ್ಕಳು ಮತ್ತು ಸಂಸ್ಥೆಯ ಕುರಿತು ಮಾತನಾಡಿ ತಮ್ಮ ಶುಭ ಆಶೀರ್ವಾದವನ್ನು ನೀಡಿದರು.
ಬೆಸ್ಟ್ ಜ್ಞಾನ ದೇಗುಲದ ಸೇವೆಯನ್ನು ಪ್ರಶoಸಿದರು. ಮಕ್ಕಳಿಗೆ ಕೊಡುವ ಅತಿ ದೊಡ್ಡ ಆಸ್ತಿ ಎಂದರೆ  ಅದು ಜ್ಞಾನಸಂಪತ್ತು ಎಂದರು. ಸಂಸ್ಥೆಯ ಸಂಸ್ಥಾಪಕರು, ಪದಾಧಿಕಾರಿಗಳು ಶಿಕ್ಷಕರ ಸೇವೆಯನ್ನು ಅಭಿನಂದಿಸಿದ್ದಾರೆ.ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿ ರಾರಾಜಿಸುತ್ತಿರುವುದು ಸಂತಸದ ಸಂಗತಿ ,ಪೋಷಕರ  ಆಯ್ಕೆಯನ್ನು ಅಭಿನಂದಿಸಿದ್ದಾರೆ . ಈ ಸಂದರ್ಭದಲ್ಲಿ ಆಯೋಜಿಸಿದ ಸಾಮೂಹಿಕ ಗಾಯನ, ಶಿವ ತಾಂಡವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು  ವೀಕ್ಷಕರನ್ನು ರಂಜಿಸಿದವು.