ಬೆಸ್ಟ್ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ

ಬಳ್ಳಾರಿ, ಆ.15 77ನೇ ಸ್ವಾತಂತ್ರ್ಯ ದಿನಾಚರಣೆಯನು ಬೆಸ್ಟ್ ಸಂಸ್ಥೆಯಲ್ಲಿ ಅದ್ದೂರಿಯಾಗಿ ನಡೆಸಲಾಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿ ಎಸ್ ಕೆ ವಿಶ್ವವಿದ್ಯಾಲಯದ ಆಂಗ್ಲ ಮುಖ್ಯಸ್ಥರು ಪ್ರೊಫೆಸರ್ ಆದ ರಾಬರ್ಟ್ ಜಸ್ ಆಗಮಿಸಿದ್ದರು ಅವರಿಂದ ಧ್ವಜಾರೋಹಣ ಮಾಡಿಸಲಾಯಿತು ಮತ್ತೋರ್ವ ಅತಿಥಿಯಾಗಿ ಹನುಮಂತಪ್ಪ ನಿವೃತ್ತ ಮುಖ್ಯೋಪಾಧ್ಯಾಯರು ಆಗಮಿಸಿದ್ದರು ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಅತಿಥಿಗಳು ಮಾತನಾಡಿ ದೇಶದ ಏಳಿಗೆ, ವಿದ್ಯಾರ್ಥಿಗಳ ಭವಿಷ್ಯ, ಸ್ವಾತಂತ್ರ್ಯದ ನಿಜವಾದ ಅರ್ಥವನ್ನು  ತಿಳಿಸಿಕೊಟ್ಟರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೇಶಭಕ್ತಿ ಗೀತೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗನ್ನು ಕೊಟ್ಟವು.ಎನ್.ಸಿ.ಸಿ ವಿದ್ಯಾರ್ಥಿಗಳ ವಿಶೇಷ ಪೆರೇಡ್ ಆಕರ್ಷಿಸುತು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರು ತಿಲಕ್ ಕುಮಾರ್ ಕಾರ್ಯದರ್ಶಿಗಳು ಶ್ರೀನಿವಾಸಲು ,ಉಪ ಪ್ರಾಂಶುಪಾಲರು ಶ್ರೀನಿವಾಸ ರೆಡ್ಡಿ ಶಾಲೆಯ ಮುಖ್ಯಸ್ಥರು ರತ್ನಕುಮಾರಿ, ಲೋಕಪ್ಪ, ಅರುಣ ,ಜ್ಯೋತಿ , ಸಿಬ್ಬಂದಿ, ವಿದ್ಯಾರ್ಥಿಗಳು, ವರ್ಗದವರು ಹಾಜರಿದ್ದರು