ಬೆಸ್ಟ್ ಕಾಲೇಜಿನಲ್ಲಿ ರೆಡ್‍ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭ’


(ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.24: ಜಿಲ್ಲೆಯ ಪ್ರತಿಷ್ಠಿತ ಬೆಸ್ಟ್ ಸಂಸ್ಥೆಯ ಕಲಾಕ್ಷೇತ್ರದಲ್ಲಿ ಕಿರಿಯ ರೆಡ್‍ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭ  ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ಶ್ರೀ ರಾಹುಲ್ ಎಸ್. ಸಂಕನೂರ್, ಐ.ಎ.ಎಸ್ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಬಳ್ಳಾರಿ ಮತ್ತು ಉಪಾಧ್ಯಕ್ಷರು ಐ.ಆರ್.ಸಿ.ಎಸ್ ಬಳ್ಳಾರಿ) ಇವರು ಜ್ಯೋತಿ ಬೆಳಗಿಸುವ ಮೂಲಕ ಮತ್ತು ಗಿಡನೆಡುವುದರ ಮೂಲಕ ರೆಡ್‍ಕ್ರಾಸ್ ಘಟಕದ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು, ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡು ಜನ್ಮ ನೀಡಿದ ನಾಡಿಗೆ ಕೀರ್ತಿಯನ್ನು ತರಬೇಕು, ಹಳ್ಳಿಗಳ ಉದ್ಧಾರ ಮಾಡಬೇಕು ಎಂದು ಹಿತವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಗಿರೀಶ್ ಎಂ.ಟಿ.(ಡಿಡಿಪಿಯುಇ) ಇವರು ದೈಹಿಕವಾಗಿ ಸಬಲರಾದರೆ ಮಾನಸಿಕವಾಗಿಯೂ ಸಬಲರಾಗುತ್ತಾರೆ ಓದುವುದರ ಜೊತೆಜೊತೆಯಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ರೆಡ್‍ಕ್ರಾಸ್ ಗಳ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಅಧ್ಯಕ್ಷರಾದ ಡಾ|| ಎಸ್.ಜೆ.ವಿ ಮಹಿಪಾಲ್(ವೈಸ್ ಛೇರ್‍ಮನ್ ಐ.ಆರ್.ಸಿ.ಎಸ್ ಬಳ್ಳಾರಿ) ಇವರು ರೆಡ್‍ಕ್ರಾಸ್ ಸಂಸ್ಥೆಯ ಉದ್ದೇಶಗಳು ಮತ್ತು ಮಹತ್ವವನ್ನು ವಿವರಿಸುತ್ತಾ ನೊಂದವರ ಕಣ್ಣೀರನ್ನು ಒರೆಸುವ ಕೆಲಸ ಆಗಬೇಕು, ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಬೇಕು, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಆಗಮಿಸಿದ ಎಲ್ಲಾ ಅತಿಥಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ  ಶ್ರೀ ಕೆ.ವೀರೇಶ್ (ನಿವೃತ್ತ ಪ್ರಾಚಾರ್ಯರು, ಆರ್.ವೈ.ಎಂ.ಸಿ), ಶ್ರೀ ಎಂ.ಎ.ಶಕೀಬ್(ಜಿಲ್ಲಾಕಾರ್ಯದರ್ಶಿ, ಐ.ಆರ್.ಸಿ.ಎಸ್ ಬಳ್ಳಾರಿ), ಶ್ರೀ ಮನ್ನೆ ಶ್ರೀನಿವಾಸುಲು (ಕಾರ್ಯದರ್ಶಿ, ಬೆಸ್ಟ್ ಶಿಕ್ಷಣ ಸಂಸ್ಥೆ), ಕಾಲೇಜು ಪ್ರಾಚಾರ್ಯರಾದ ಶ್ರೀ ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯರಾದ ಶ್ರೀ ಜಿ. ಶ್ರೀನಿವಾಸರೆಡ್ಡಿ, ಜೆ.ಆರ್.ಸಿ ಸಂಯೋಜಕರಾದ ಶ್ರೀ ಅಬ್ದುಲ್ ಜಲೀಲ್ ಕೆ., ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು