
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.12: ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ಬೆಸ್ಟ್ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಶಫೀ ಉಲ್ಲಾ ಸಹಾಯಕ ಸಂಚಾರಿ ನಿರೀಕ್ಷಕರು, ಬಳ್ಳಾರಿ, ಎರ್ರಿಸ್ವಾಮಿ ಸಿಆರ್‍ಪಿ, ಶಿಕ್ಷಣ ಇಲಾಖೆ, ಮೆಹತಾಬ್, ಮುಖ್ಯೋಪಾಧ್ಯಾಯರು, ಮೋಕಾ, ಚಂದ್ರಶೇಕರ್ ಆಚಾರ್, ಕಾರ್ಯದರ್ಶಿಗಳು, ಸನ್ಮಾರ್ಗ ಗೆಳೆಯರ ಬಳಗ, ಆಯುಬ್ ಸಾಬ್, ಹೆಡ್‍ಕಾನ್ಸ್‍ಟೇಬಲ್, ಇವರು ರಸ್ತೆ ಸುರಕ್ಷತಾ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಾ ಜೀವನದ ಮೌಲ್ಯಗಳನ್ನು ಬದುಕಿನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು, ಸಂಚಾರಿ ನಿಯಮಗಳನ್ನು ಹೇಗೆ ಅನುಸರಿಸಬೇಕು ಎಂಬುದನ್ನು ತಿಳಿಹೇಳಿ ಅತಿಯಾದ ವೇಗ ಯಮಲೋಕಕ್ಕೆ ಹೋಗುವೆವು ಬೇಗ, ನಿಧಾನವೇ ಪ್ರಧಾನ, ಆದ್ದರಿಂದ ನಾವು ಸುರಕ್ಷಿತವಾಗಿದ್ದರೆ ನಮ್ಮ ಕುಟುಂಬ ಸುರಕ್ಷಿತವಾಗಿರುತ್ತದೆ ಇಲ್ಲದಿದ್ದರೆ ಎಲ್ಲರೂ ಕಷ್ಟಪಡಬೇಕಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯರಾದ ಶ್ರೀ ಜಿ. ಶ್ರೀನಿವಾಸರೆಡ್ಡಿ, ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
One attachment • Scanned by Gmail