ಬೆಸ್ಕಾಂ ನಿರ್ಲಕ್ಷ್ಯ: ಜೋತು ಬಿದ್ದ ವಿದ್ಯುತ್ ತಂತಿ

ಚಿಕ್ಕನಾಯಕನಹಳ್ಳಿ, ಜು. ೨೬- ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಂ.ಎಚ್. ಕಾವಲು ತಾಂಡ್ಯದ ರಸ್ತೆಯಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿದ್ದು ಈ ತಂತಿಗಳು ಒಂದಕ್ಕೊಂದು ಸ್ಪರ್ಶವಾಗಿ ಅಗ್ನಿ ಅವಘಡ ಗಳಾಗುವಂತಹ ಘಟನೆಗಳು ನಡೆಯುವ ಸಂಭವವಿದೆ.
ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಜನಸಾಮಾನ್ಯರು ಓಡಾಡುವ ಜಾಗದಲ್ಲಿ ತುಂಡಾಗಿ ಬೀಳುತ್ತಿವೆ ಇದರಿಂದ ಪಾದಾಚಾರಿಗಳಿಗೆ ಪ್ರಾಣಾಪಾಯದಂತಹ ಘಟನೆಗಳು ಸಂಭವಿಸುವ ಅವಕಾಶವಿದೆ. ತಂತಿಗಳು ಜೋತು ಬಿದ್ದಿರುವುದರಿಂದ ವಿದ್ಯುತ್ ಕಂಬದ ದಾರಿಯಲ್ಲಿ ವಾಹನಗಳು ಓಡಾಡಲು ಆಗದಂತಾಗಿದೆ. ಈ ಸಮಸ್ಯೆ ಕುರಿತು ಬೆಸ್ಕಾo ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಬೆಸ್ಕಾಂ ವಿಭಾಗ ಅಧಿಕಾರಿ ಯೋಗೇಂದ್ರ ಅವರ ಗಮನಕ್ಕೆ ಈ ಸಮಸ್ಯೆಯನ್ನು ಸಲ್ಲಿಸಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮುಂದೆ ಆಗುವ ಅವಘಡಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಆಗುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.