
ಕೋಲಾರ,ಮೇ,೧೯- ನಗರದ ರಾಷ್ಟ್ರೀಯ ಹೆದ್ದಾರಿ ೭೫ರ ಸರ್ವಿಸ್ ರಸ್ತೆಯಲ್ಲಿ ಬೆಸ್ಕಾಂ ವತಿಯಿಂದ ೧೧.ಕೆ.ವಿ. ಕೇಬಲ್ ಹಾಕಲು ರಸ್ತೆ ಬದಿಯಲ್ಲಿ ಹಳ್ಳವನ್ನು ಮಾಡಿ ಹಲವು ತಿಂಗಳುಗಳೆ ಕಳೆದರೂ ಸಹ ಈವರೆಗೆ ಪೂರ್ಣಗೊಳಿಸದೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಸಂಬಂದವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಹಲವಾಚಿರು ಭಾರಿ ದೂರಿದರು ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
೧೧ ಕೆ.ವಿ. ಕೇಬಲ್ ಅಳವಡಿಸಲು ರಸ್ತೆ ಬದಿಯಲ್ಲಿ ಜೆ.ಸಿ.ಬಿ.ಗಳಿಂದ ಹಳ್ಳವನ್ನು ಮಾಡಿ ಹಲವು ತಿಂಗಳುಗಳು ಕಳೆದಿದೆ. ಅದರೆ ಹಳ್ಳಗಳನ್ನು ಪೂರ್ಣವಾಗಿ ಅದರ ಮೇಲೆ ಡಾಂಬರ್ ಹಾಕುವ ಮೂಲಕ ಯಾಥಾಸ್ಥಿತಿ ಕಾಪಡುವಲ್ಲಿ ಬೆಸ್ಕಾಂ ವಿಫಲವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾರ್ವಜನಿಕರ ಹಣದಲ್ಲಿ ರಸ್ತೆಗಳನ್ನು ಮಾಡಿದೆ. ಅದರೆ ಬೆಸ್ಕಾಂ ಅವರು ಕೇಬಲ್‌ಗಳನ್ನು ಅಳವಡಿಸಿದ ಮೇಲೆ ಯಾಥಾ ಸ್ಥಿತಿ ಕಾಪಾಡ ಬೇಕೆಂಬ ಪರಿಜ್ಷಾನ ಇಲ್ಲದೆ ನಿರ್ಲಕ್ಷಿಸಿರುವುದು ಅಧಿಕಾರಗಳ ಕರ್ತವ್ಯ ಲೋಪವಾಗಿದೆ
ಈ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರ ಇದ್ದು ಅಗಾಗ್ಗೆ ಹಳ್ಳದಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಈ ಸಂಬಂಧವಾಗಿ ಸಾರ್ವಜನಿಕ ಹಿತದೃಷ್ಠಿಯಿಂದ ಸಾರ್ವಜನಿಕ ಹಿತಾಸಕ್ತಿಯ ದೂರು ದಾಖಲಿಸಲು ಚಿಂತಿಸಿದ್ದಾರೆ.
ಒಂದು ವಾರದೊಳಗೆ ರಸ್ತೆಯಲ್ಲಿ ಕೇಬಲ್ ಹಾಕಲು ಮಾಡಿರುವ ಹಳ್ಳಗಳನ್ನು ಸಮರ್ಪವಾಗಿ ಮುಚ್ಚಿ ಯಾಥ ಸ್ಥಿತಿ ಕಾಪಡ ಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಸಾರ್ವಜನಿಕರ ಪರವಾಗಿ ಬೆಮೆಲ್‌ನ ಕೆ.ಎಸ್. ಜಯಪ್ರಕಾಶ್ ಎಚ್ಚರಿಸಿದ್ದಾರೆ.