ಬೆವರಿನ ದುರ್ಗಂಧಕ್ಕೆ ಮನೆಮದ್ದು

೧. ಕೆಲವರಿಗೆ ವಿಪರೀತ ಬೆವರು ಬರುತ್ತದೆ. ಅದರಿಂದಾಗಿ ಹೆಚ್ಚಿನ ವಾಸನೆಯಿಂದ ಅವರಿಗೆ ಮುಜುಗರದ ಪರಿಸ್ಥಿತಿ ಇರುತ್ತದೆ. ನೇರಳೆ ಎಲೆಯನ್ನು ಅರೆದು ನೀರಿಗೆ ಹಾಕಿ, ಆ ನೀರಿನಿಂದ ಸ್ನಾನ ಮಾಡುತ್ತಾ ಬಂದರೆ ಬೆವರಿನ ವಾಸನೆ ಕಡಿಮೆ ಆಗುತ್ತದೆ.
೨. ಬೆವರುಸಾಲೆ: ಬಿಸಿಲಿನ ತಾಪದಿಂದ ಸಣ್ಣಸಣ್ಣ ಗುಳ್ಳೆಗಳಾಗಿ ವಿಪರೀತ ನೆವೆ, ಕೆಲವೊಮ್ಮೆ ಕೆಂಪಾಗುವಿಕೆ ಈ ರೀತಿ ಸಮಸ್ಯೆಗಳು ಬರುತ್ತವೆ ಆ ಸಮಯದಲ್ಲಿ ಕೇವಲ ಅಕ್ಕಿ ತೊಳೆದ ನೀರಿನಿಂದ ಆ ಭಾಗವನ್ನು ತೊಳೆಯುತ್ತಾ ಬಂದರೆ ೨ – ೩ ದಿನಗಳಲ್ಲಿ ಗುಣಕಾಣುವುದು.
೩. ಜೀರಿಗೆಯನ್ನು ಪುಡಿಮಾಡಿಕೊಂಡು ಆ ಪುಡಿಯನ್ನು ತೆಂಗಿನ ಹಾಲಿನಲ್ಲಿ ಕಲಸಿ ಸವರಿಕೊಳ್ಳುತ್ತಾ ಬನ್ನಿ ೩ ದಿನ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ.
೪. ಬೇಸಿಗೆ ಕಾಲ ಪ್ರಾರಂಭವಾದ ದಿನದಿಂದ ಈ ಒಂದು ಕೆಲಸ ಮಾಡಿದರೆ ಈ ಸಮಸ್ಯೆ ಬರುವುದಿಲ್ಲ. ಮಾವಿನೆಲೆ, ಬೇವಿನ ಎಲೆ, ನೇರಳೆ ಎಲೆ, ಸೀಬೆ ಎಲೆ ಎಲ್ಲವನ್ನೂ ಒಂದು ಪಾತ್ರೆಯ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ, ಆ ನೀರನ್ನು ಸ್ನಾನ ಮಾಡುವ ನೀರಿನ ಬಕೆಟ್‌ಗೆ ಸುರಿದುಕೊಂಡು ಆ ನೀರಿನಲ್ಲಿ ಸ್ನಾನ ಮಾಡಿ ಹೀಗೆ ವಾರಕ್ಕೆ ಒಮ್ಮೆ ಮಾಡುತ್ತಾ ಬಂದರೆ, ಬೆವರಿನ ಸಮಸ್ಯೆ, ಬೆವರಿನ ದುರ್ಗಂಧ, ಬೆವರುಸಾಲೆ, ಈ ರೀತಿ ಎಲ್ಲಾ ಸಮಸ್ಯೆಗೂ ಉತ್ತಮ ಉಪಚಾರ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.