ಬೆಳ್ಳೂಡಿ ಕನಕ ಶಾಖಾಪೀಠದಲ್ಲಿ ವಾರ್ಷಿಕೋತ್ಸವ; ಸಿದ್ದತೆಗಳ ಪರಿಶೀಲನೆ

ಹರಿಹರ.ಮಾ. 30 ; ವಿದ್ಯಾರ್ಥಿ ನಿಲಯ ಸಮುದಾಯ ಭವನ ಮತ್ತು ಮುಖ್ಯ ದ್ವಾರ ಉದ್ಘಾಟನೆ ಹಾಗೂ ನೂತನ ಬೀರದೇವರ ಪ್ರಾಣ ಪ್ರತಿಷ್ಠಾಪನೆ ಮಹಾ ಕುಂಭಾಭಿಷೇಕ ಶಾಖಾ ಮಠದ 5ನೇ ವಾರ್ಷಿಕೋತ್ಸವ ಸಮಾರಂಭವು ಏ 3 ರಿಂದ – 5 ರವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ  ತಹಸೀಲ್ದಾರ್ ಕೆ ಬಿ ರಾಮಚಂದ್ರಪ್ಪ .ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ್ ಯು. .ಗ್ರಾಮಾಂತರ ಠಾಣೆಯ ಪಿಎಸ್ ಐ ಡಿ ರವಿಕುಮಾರ್ .ಇವರುಗಳು ಬೆಳ್ಳೂಡಿ ಕನಕ ಪೀಠದ ಶ್ರೀಗಳೊಂದಿಗೆ ಕೋವಿಡ್ 19 ಮಾರ್ಗ ಸೂಚಿಗಳನ್ವಯ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಚರ್ಚಿಸಿದರು  ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಮಾತನಾಡಿ ಸರ್ಕಾರದ ಆದೇಶದಂತೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸುತ್ತೇವೆ. ದಾರ್ಶನಿಕರ ಪ್ರತಿಮೆಗಳ ಅನಾವರಣ ಮತ್ತು ಕುರುಬರ ಎಸ್ ಟಿ ಹೋರಾಟದ ಪಾದಯಾತ್ರಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಬೀರಲಿಂಗೇಶ್ವರ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ  ತ್ರಿದಿನ ಪೂಜೆ ಮಹಾಸಂಕಲ್ಪ   ಏ 3ರ ಶನಿವಾರ  ಬೆಳಿಗ್ಗೆ 8- ಕ್ಕೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠದ  ಕೆ ಆರ್ ನಗರ ಪರಮಪೂಜ್ಯ ಶ್ರೀ ಶಿವಾನಂದಪುರಿ ಮಹಾ ಸ್ವಾಮೀಜಿಗಳೆಲ್ಲ ಧ್ವಜಾರೋಹಣ ಕಾರ್ಯಕ್ರಮ   ಬೆಳಿಗ್ಗೆ  8 ಗಂಟೆಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ .ಮಲೆಬೆನ್ನೂರು ಕೊಮಾರನಹಳ್ಳಿ .ಹಿರೇಹಾಲಿವಾಣ .ಕುಣೆಬೆಳಕೆರೆ .ಸಲಗನಹಳ್ಳಿ .ಬನ್ನಿಕೋಡು . ರಾಜನಹಳ್ಳಿ .ನಂದಿಗಾವಿ .ಎಳೆಹೊಳೆ .ಉಕ್ಕಡಗಾತ್ರಿ ಜಿಟಿ ಕಟ್ಟೆ ಬಾನುವಳ್ಳಿ ಗಂಗನರಸಿ ಹರಿಹರ ದೊಡ್ಡಬಾತಿ ಬೆಳ್ಳೂಡಿ ಗ್ರಾಮದ ಬೀರ ದೇವರು ಶ್ರೀ ಆಂಜನೇಯ ಸ್ವಾಮಿ .ಶ್ರೀ ಚಂದ್ರಗುತ್ತೆಮ್ಮ ದೇವಿಯ. ಶ್ರೀ ದುರ್ಗಮ್ಮ ದೇವಿ .ಶ್ರೀ ಬಸವಣ್ಣ ಅನಗವಾಡಿ ಶ್ರೀ ಚೌಡೇಶ್ವರಿ ದೇವಿ ಮತ್ತು ವೀರಭದ್ರ ಸ್ವಾಮಿ .ರಾಮತೀರ್ಥರ ಶ್ರೀ ದುರ್ಗಮ್ಮ. ಹೊನ್ನಳ್ಳಿ ತಾಲ್ಲೂಕಿನ ಮುಕ್ತೇನಹಳ್ಳಿ ಶಿಕಾರಿಪುರ ತಾಲ್ಲೂಕು ಮುಗಳ ಗೇರಿಯ ಬೀರ ದೇವರು .ಚಿತ್ರದುರ್ಗ ಹೊಸದುರ್ಗ ಹಾವೇರಿ ರಾಣೆಬೆನ್ನೂರು ತಾಲ್ಲೂಕಿನಿಂದ ಎಲ್ಲಾ ಗ್ರಾಮಗಳಿಂದ ಬರುವ ಎಲ್ಲಾ ಕುಲ ದೇವರುಗಳಿಗೆ ಭವ್ಯ ಸ್ವಾಗತ ಕಾರ್ಯಕ್ರಮ ನಡೆಯುತ್ತದೆ .ಬೆಳಿಗ್ಗೆ 11 ಗಂಟೆಗೆ ಬೆಳ್ಳೂಡಿ ಗ್ರಾಮದ ಒಳ ಗುಡಿಯಿಂದ ಹೊರ ಗುಡಿಯವರೆಗೂ ಶ್ರೀ ವೀರ ದೇವರುಗಳ ಉತ್ಸವದಲ್ಲಿ ತ್ರಿದ೦ಡಿ  ಸಂಕಟ ರಾಮಾನುಜಾ ಜೀಯರ್ ಶ್ರೀ ರಾಮಾನುಜ ಮಠ ಬೆಂಗಳೂರು ಇವರು ದಿವ್ಯ ಸಾನಿಧ್ಯವನ್ನು ವಹಿಸುವರು ಸುತ್ತೂರು ಶ್ರೀ ಸಾನಿಧ್ಯ ವಹಿಸುವರು .ಏ 4 ರಂದು  ಬೆಳಿಗ್ಗೆ 11-30 ಕ್ಕೆ  ತುಮಕೂರು ಸಿದ್ದಗಂಗಾ ಮಠದ  ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು ವಹಿಸುವರು ಅಂದು ನಡೆಯುವ ಉದ್ಘಾಟನೆ ಕಾರ್ಯಕ್ರಮವನ್ನು  ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ನೆರೆವೇರಿಸುವರು  ವಿರೋಧ ಪಕ್ಷದ ಮಾಜಿ ಮುಖ್ಯಮಂತ್ರಿಗಳು ನಾಯಕರಾದ ಸಿದ್ದರಾಮಯ್ಯನವರು ಅಧ್ಯಕ್ಷತೆ ವಹಿಸುವರು  ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ .ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ .ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ .ಪೌರಾಡಳಿತ ಖಾತೆ ಸಚಿವರಾದ ಎಂ ಟಿ ಬಿ ನಾಗರಾಜ್ .ರೇಷ್ಮೆ ಮತ್ತು ತೋಟಗಾರಿಕೆ ಸಚಿವರಾದ ಆರ್ ಶಂಕರ್ .ಸಂಸದರ ಜಿ ಎಂ ಸಿದ್ದೇಶ್ವರ್ .ಎಚ್ ವಿಶ್ವನಾಥ್ ಬಂಡೆಪ್ಪ ಕಾಶಂಪೂರ್ ಮತ್ತಿತರರು ಆಗಮಿಸಲಿದ್ದಾರೆ.ಏ 5 ರ  ಬೆಳಿಗ್ಗೆ 11- 30 ಕ್ಕೆ ನೂತನ ಬೀರದೇವರ ಪ್ರಾಣ ಪ್ರತಿಷ್ಠಾಪನಾ ಮಹಾಕುಂಭ ಅಭಿಷೇಕ ಜರುಗಲಿದೆ ಎಂದರು.ಈವೇಳೆಚೂರಿ ಜಗದೀಶ್ .ಹರೀಶ್ .ಶರಣಪ್ಪ .ಸಿದ್ದೇಶ್ .ಮಠದ ಸದ್ಭಕ್ತರು ಇದ್ದರು