ಬೆಳ್ಳೂಡಿ ಕನಕ ಪೀಠದ ಶಾಖಾ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

 

ಹರಿಹರ ಮಾ 31; ಬೆಳ್ಳೂಡಿಯ ಕನಕ ಶಾಖಾ ಮಠದಲ್ಲಿ  ಮಹಾಕುಂಭಾಭಿಷೇಕ ಶಾಖಾಮಠದ ಐದನೇ ವಾರ್ಷಿಕೋತ್ಸವ ಸಮಾರಂಭದ ಧಾರ್ಮಿಕ ಈ ಕಾರ್ಯಕ್ರಮಗಳು ನಡೆಯುತ್ತದೆ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಹೇಳಿದರು ಏ3ರಿಂದ  ಏ 5ರವರೆಗೂ  3ದಿನಗಳ ಕಾಲ ನಡೆಯುವ ಸಮಾರಂಭದಲ್ಲಿ ಕಾಗಿನೆಲೆ 
ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠದ  ಕೆ ಆರ್ ನಗರ ಪರಮಪೂಜ್ಯ ಶ್ರೀ ಶಿವಾನಂದಪುರಿ  ಸ್ವಾಮಿಗಳಿಂದ ಧ್ವಜಾರೋಹಣ ಕಾರ್ಯಕ್ರಮ ಏ 3 ರಬೆಳಿಗ್ಗೆ  8 ಗಂಟೆಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ .ಮೇಲೆಬೆನ್ನೂರು ಕೊಮಾರನಹಳ್ಳಿ .ಹಿರೆಹಾಲಿವಾಣ .ಕುಣೆಬೆಳಕೆರೆ .ಸಲಗನಹಳ್ಳಿ .ಬನ್ನಿಕೋಡು . ರಾಜನಹಳ್ಳಿ .ನಂದಿಗಾವಿ .ಎಳೆಹೊಳೆ .ಉಕ್ಕಡಗಾತ್ರಿ ಜಿಟಿ ಕಟ್ಟೆ .ಬಾನುವಳ್ಳಿ .ಗಂಗನರಸಿ ಹರಿಹರ ದೊಡ್ಡಬಾತಿ .ಬೆಳ್ಳೂಡಿ ಗ್ರಾಮದ ಬೀರ ದೇವರು ಶ್ರೀ ಆಂಜನೇಯ ಸ್ವಾಮಿ .ಶ್ರೀ ಚಂದ್ರಗುತ್ತೆಮ್ಮ ದೇವಿಯ. ಶ್ರೀ ದುರ್ಗಮ್ಮ ದೇವಿ .ಶ್ರೀ ಬಸವಣ್ಣ ಹನಗವಾಡಿ ಶ್ರೀ ಚೌಡೇಶ್ವರಿ ದೇವಿ .ಮತ್ತು ವೀರಭದ್ರ ಸ್ವಾಮಿ .ರಾಮತೀರ್ಥರ ಶ್ರೀ ದುರ್ಗಮ್ಮ. ಹೊನ್ನಳ್ಳಿ ತಾಲ್ಲೂಕಿನ ಮುಕ್ತೇನಹಳ್ಳಿ ಶಿಕಾರಿಪುರ ತಾಲ್ಲೂಕು ಮುಗಳ ಗೇರಿಯ ಬೀರ ದೇವರು .ಚಿತ್ರದುರ್ಗ ಹೊಸದುರ್ಗ ಹಾವೇರಿ ರಾಣೆಬೆನ್ನೂರು ತಾಲ್ಲೂಕಿನಿಂದ ಎಲ್ಲಾ ಗ್ರಾಮಗಳಿಂದ ಬರುವ ಎಲ್ಲಾ ಕುಲ ದೇವರುಗಳಿಗೆ ಭವ್ಯ ಸ್ವಾಗತ ಕಾರ್ಯಕ್ರಮ ನಡೆಯುತ್ತದೆ .ಬೆಳಿಗ್ಗೆ 11 ಗಂಟೆಗೆ ಬೆಳ್ಳೂಡಿ ಗ್ರಾಮದ ಒಳ ಗುಡಿಯಿಂದ ಹೊರ ಗುಡಿಯವರೆಗೂ ಶ್ರೀ ವೀರ ದೇವರುಗಳ ಉತ್ಸವದಲ್ಲಿ ತ್ರಿದ೦ಡಿ  ವೆಂಕಟ ರಾಮಾನುಜಾ ಜೀಯರ್ ಶ್ರೀ ರಾಮಾನುಜ ಮಠ ಬೆಂಗಳೂರು ಇವರು ದಿವ್ಯ ಸಾನಿಧ್ಯವನ್ನು ವಹಿಸುವರು  ಉತ್ಸವದ ಉದ್ಘಾಟನೆ ಬೆಳ್ಳೂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್ ಗಂಗಮ್ಮ ಕೋಂ ಬೀರಪ್ಪ ಇವರು ನೆರವೇರಿಸುವರು .ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ ದ್ಯಾವಪ್ಪ ಅಧ್ಯಕ್ಷತೆ ವಹಿಸುವರು ಜಿ ಪಂ ತಾಪಂ ಗ್ರಾಪಂ ಹಾಲಿ ಅಧ್ಯಕ್ಷರು ಮಾಜಿ ಅಧ್ಯಕ್ಷರು ಸರ್ವ ಸದಸ್ಯರು ಗ್ರಾಮಸ್ಥರು ಸಮಾಜದ ಬಂಧುಗಳು ಬಾಗವಹಿಸುವರು ಎಂದರು .  ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಸುತ್ತೂರು ಮಹಾಸಂಸ್ಥಾನ ಮಠ  ದಿವ್ಯ ಸಾನಿಧ್ಯ ವಹಿಸುವರು .ಏ 4 ರಂದು  ಬೆಳಿಗ್ಗೆ 11-30 ಕ್ಕೆ  ತುಮಕೂರು ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು 
ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು ವಹಿಸುವರು ಅಂದು ನಡೆಯುವ ಉದ್ಘಾಟನೆ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ನೆರೆವೇರಿಸುವರು.ಮಾಜಿ ಮುಖ್ಯಮಂತ್ರಿಗಳು ವಿರೋಧ ಪಕ್ಷದ  ನಾಯಕರಾದ ಸಿದ್ದರಾಮಯ್ಯನವರು ಅಧ್ಯಕ್ಷತೆ ವಹಿಸುವರು  ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ .ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ .ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ .ಪೌರಾಡಳಿತ ಖಾತೆ ಸಚಿವರಾದ ಎಂ ಟಿ ಬಿ ನಾಗರಾಜ್ .ರೇಷ್ಮೆ ಮತ್ತು ತೋಟಗಾರಿಕೆ ಸಚಿವರಾದ ಆರ್ ಶಂಕರ್ .ಸಂಸದರ ಜಿ ಎಂ ಸಿದ್ದೇಶ್ವರ್ .
ಎಚ್ ವಿಶ್ವನಾಥ್ ಬಂಡೆಪ್ಪ ಕಾಶಂಪೂರ್. ಎಚ್ ಎಂ ರೇವಣ್ಣ .ಕೆ ವಿರೂಪಾಕ್ಷಪ್ಪ .ಹರಿಹರ ಶಾಸಕ ಎಸ್ ರಾಮಪ್ಪ .ಬೈರತಿ ಸುರೇಶ್ .ಪ್ರಸನ್ನಕುಮಾರ .ಶಾಸಕರು ವಿಧಾನಪರಿಷತ್ ಸದಸ್ಯರುಗಳು ಮಾಜಿ ಶಾಸಕರುಗಳು ಭಾಗವಹಿಸುವರು ಎಂದರು ಏ 5 ರ  ಬೆಳಿಗ್ಗೆ 11- 30 ಕ್ಕೆ ನೂತನ ಬೀರದೇವರ ಪ್ರಾಣ ಪ್ರತಿಷ್ಠಾಪನಾ ಮಹಾಕುಂಭ ಅಭಿಷೇಕದಲ್ಲಿ  ಪರಮ ಪೂಜ್ಯ ಈಶ್ವರಾನಂದ ಪುರಿ ಮಹಾಸ್ವಾಮಿಗಳು .ಸಿದ್ಧರಾಮಾನಂದ ಪುರಿ .ಪ್ರಸನ್ನಾನಂದ ಪುರಿ. ಮುಮ್ಮಡಿ ಸಿದ್ಧರಾಮೇಶ್ವರ .ವೇಮಾನಂದ ಪುರಿ .ಜಯ ಮೃತ್ಯುಂಜಯ .ಶಾಂತವೀರ .ಮಾದರ ಚೆನ್ನಯ್ಯ ಇಮ್ಮಡಿ ಸಿದ್ಧರಾಮೇಶ್ವರ .ವಚನಾನಂದ .ಶಾಂತಭೀಷ್ಮ .ಮಾಚಿ ದೇವ .ವಿವಿಧ ಮಠಾಧೀಶರು ದಿವ್ಯ ಸಾನಿಧ್ಯದಲ್ಲಿ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು .ಸರಕಾರದ ಮಾರ್ಗಸೂಚಿಗಳ ಅನ್ವಯ ಚಾಚೂ ತಪ್ಪದಂತೆ ಧರ್ಮ ಕಾರ್ಯಕ್ರಮ ಮಾಡುತ್ತೇವೆ ಎಂದರು