ಬೆಳ್ಳಿ ಹಬ್ಬದ ಪಂಚಮುಖಿ ಪ್ರಾಣದೇವರ ಸನ್ನಿಧಿಯಲ್ಲಿ ರಾಮ ನವಮಿ

ವಿಜಯಪುರ, ಏ.16:ಇಲ್ಲಿಯ ಮನಗೂಳಿ ರಸ್ತೆಯ ವಿವೇಕ ನಗರ(ಪೂರ್ವ) ಬಡಾವಣೆಯಲ್ಲಿರುವ ಶ್ರೀ ಪ್ರಸನ್ನ ಪಂಚಮುಖಿ ಪ್ರಾಣದೇವರ ಹಾಗೂ ಶ್ರೀ ಚಕ್ರಾಂಕಿತರಾಮೇಶ್ವರ ದೇವರ ಸನ್ನಿಧಿಯ 25ನೇ ವರ್ಷದ ಹನುಮ ಜಯಂತಿ ಉತ್ಸವ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಏ.17 ರಂದು ಶ್ರೀರಾಮ ನವಮಿಯಿಂದ ಪ್ರತಿದಿನ ಸಂಜೆ 5ರಿಂದ 6 ಗಂಟೆವರೆಗೆ ಒಂದು ಗಂಟೆಯ ಕಾಲ ಪಂಡಿತ ಶ್ರೀ ಮಧ್ವೇಶಾಚಾರ್ಯ ಜೋಶಿ(ಮುತ್ತಗಿ) ಇವರಿಂದ ರಾಮಾಯಣ ಕುರಿತ ಪ್ರವಚನ ಹಮ್ಮಿ ಕೊಳ್ಳಲಾಗಿದೆ.
ಅಲ್ಲದೇ ಪ್ರತಿದಿನ ಸಂಜೆ ಆರು ದಿನಗಳ ಕಾಲ ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರುಗಲಿವೆ ಎಂದು ಸನ್ನಿಧಿಯ ಪ್ರಕಟಣೆ ತಿಳಿಸಿದೆ.