ಬೆಳ್ಳಿ ಬಂಗಾರಕ್ಕಿಂತ ವಿಭೂತಿ ರುದ್ರಾಕ್ಷಿ ಶ್ರೇಷ್ಠ

ಭಾಲ್ಕಿ : ಫೆ.24:ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ 40ನೇ ದಿನ ಅರ್ಚನಾ ಅಜಯಕುಮಾರ ಬುಕ್ಕಾ ಚಂದು ಚೆನ್ನಪ್ಪ ಹೋಟೆಲ್ ಶರಣನಗರ ಅಗ್ನಿಶಾಮಕ ಗಂಜ ಭಾಲ್ಕಿ ಅವರ ಮನೆಯಲ್ಲಿ ಜರುಗಿತು. ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಸಾಗರ್ ಈಶ್ವರ ಖಂಡ್ರೆ ಅವರು ಅಧ್ಯಕ್ಷತೆ ವಹಿಸಿದ್ದರು.
ಸುರೇಶ್ ಪುರಾಂತ ಭಾಲ್ಕಿ ಅವರು ಬಸವ ಪ್ರಾರ್ಥನೆ ನೆರವೇರಿಸಿದರು. ವಿಜಯಕುಮಾರ ವಾರದ ಮೊರಂಬಿ ಉಪನ್ಯಾಸಕರು ಭಾಲ್ಕಿ ಅವರಿಂದ ಅನುಭಾವ ವಿಭೂತಿ ಹಾಗೂ ರುದ್ರಾಕ್ಷಿ ಕುರಿತು ತುಂಬಾ ಸರಳವಾಗಿ ಮಾಹಿತಿ ನೀಡಿದರು. ಬೆಳ್ಳಿ ಬಂಗಾರಕ್ಕಿಂತ ವಿಭೂತಿ ರುದ್ರಾಕ್ಷಿ ಶ್ರೇಷ್ಠ, ಬೆಳ್ಳಿ ಬಂಗಾರಕ್ಕಿಂತ ವಿಭೂತಿ ರುದ್ರಾಕ್ಷಿ ಧರಿಸುವುದರಿಂದ ಜೀವನ ಪಾವನವಾಗುವುದು ಎಂದು ಹೇಳಿದರು.
ಬುಕ್ಕಾ ಪರಿವಾರದವರಿಂದ ಬಸವಗುರು ಪೂಜೆ ನೆರವೇರಿತು. ಖುಷಿ ಅವರಿಂದ ವಚನ ಗಾಯನ ಹಾಗೂ ಶ್ರೀದೇವಿ ಶಾಂತಯ್ಯ ಸ್ವಾಮಿ ಅವರಿಂದ ಭಕ್ತಿಗೀತೆ ಜರುಗಿತು.
ಸಾವಿತ್ರಿ ಧನರಾಜ ಪಾಟೀಲ್ ಭಾಲ್ಕಿ ನಿರೂಪಿಸಿದರು. ವೇದಿಕೆಯ ಮೇಲೆ ಶೀಕ್ರೇಶ್ವರ ಶಟಕಾರ್, ಶರಣಪ್ಪ ಬಿರಾದಾರ, ಶಾಂತಯ್ಯ ಸ್ವಾಮಿ, ಬಸವರಾಜ ಮರೆ, ಮಲ್ಲಮ್ಮ ನಾಗನಕೇರೆ, ಗುಂಡಪ್ಪ ಬೆಲ್ಲಾಳೆ, ವಿಜಯಕುಮಾರ ಸುಲ್ಗುಂಟೆ, ಶಿವಕುಮಾರ ಸ್ವಾಮಿ ವಕೀಲರು ಉಪಸ್ಥಿತರಿದ್ದರು. ಇವರನ್ನು ಗೌರವಿಸಲಾಯಿತು. ರಾಜೇಂದ್ರ ಬಚ್ಚಣ್ಣ, ವೀರಣ್ಣ ಕುಂಬಾರ, ಗಿರಿ ಮಹಾರಾಜ್, ಪ್ರಭಾಕರ್ ಬೇಳಕೆರೆ, ಸೋಮನಾಥ ಹೊಸಾಳೆ, ಶ್ರೀಮಂತ ಪಾಟೀಲ್, ಬಸವರಾಜ ಗುರನಾಳೆ, ಸಂತೋಷ್ ಜೋಜನೆ, ಸಂತೋಷ್ ಕರ್ಕಳೇ, ಬಲಭೀಮಯ್ಯ ಸ್ವಾಮಿ, ಚನ್ನಪ್ಪ ಮೇತ್ರೆ, ಶಂಕರ್ ಕೇರೆ, ಶರಣಪ್ಪ ರುಮ್ಮ, ಪ್ರಭು ಪಂಚಾಕ್ಷರಿ, ಎಂ. ವ್ಹಿ. ಗಿರಿಶ್, ಹಾಗೂ ಭಾಲ್ಕಿಯ ಅನೇಕ ಶರಣ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.