ಬೆಳ್ಳಿ ಪದಕ ಪಡೆದ ಗೃಹರಕ್ಷಕಿಗೆ ಅಭಿನಂದನೆ

ದಾವಣಗೆರೆ ಏ. ೨೯; ಏ.19 ರಿಂದ 26 ರವರೆಗೆ ಬೆಂಗಳೂರು ತರಬೇತಿ ಅಕಾಡೆಮಿಯಲ್ಲಿ ನಡೆದ ಗೃಹರಕ್ಷಕಿಯರ ನಿಸ್ತಂತು ಚಾಲನಾ ತರಬೇತಿಯಲ್ಲಿ ಮೆ.ನಂ.283 ಗೃಹರಕ್ಷಕಿ ಹೆಚ್.ಶಿಲ್ಪ ಇವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಮತ್ತು ಬೆಳ್ಳಿ ಪದಕವನ್ನು ಪಡೆದು ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಇವರಿಗೆ ಕಮಾಂಡೆಂಟ್ ಡಾ.ಬಿ.ಹೆಚ್.ವೀರಪ್ಪ, ಸ್ಟಾಫ್ ಆಫೀಸರ್ ಕೆ.ಸರಸ್ವತಿ, ದಾವಣಗೆರೆ ಘಟಕಾಧಿಕಾರಿ ಕೆ.ಎಸ್ ಅಮರೇಶ್, ಕಚೇರಿ ಸಿಬ್ಬಂದಿ ಮತ್ತು ಜಿಲ್ಲೆಯ ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿರುತ್ತಾರೆ ಎಂದು ಹೋಂ ಗಾರ್ಡ್ಸ್ ಕಮಾಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.