
ತಾಳಿಕೋಟೆ:ಎ.8: ಪಟ್ಟಣದ ವಿಶ್ವ ಕರ್ಮ ಸಮಾಜದ ಅಧ್ಯಕ್ಷ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಸೋನಾರ ಎಂಬ ಕುಟುಂಭದವರು ಪಟ್ಟಣದ ಪುರಾತನ ದೇವಾಲಯವಾದ ಶ್ರೀ ಬಜಾರ ಹನುಮಾನ ದೇವರಿಗೆ ಕಳೆದ 10 ವರ್ಷಗಳ ಹಿಂದೆ ಹೊತ್ತ ಹರಕೆಯು ಕಾರ್ಯಗತವಾಗಿದ್ದರಿಂದ ಕಳೆದ ದಿ.6ರಂದು ಶ್ರೀ ಹನುಮ ಜಯಂತಿ ದಿನದಂದು ಬೆಳ್ಳಿಯ ಗದೆಯನ್ನು ಹನುಮಾನ ಮಂದಿರದ ಅರ್ಚಕರಿಗೆ ನೀಡಿ ತಮ್ಮ ಹರಕೆ ತೀರಿಸಿದ್ದಾರೆ.
ಶ್ರೀನಿವಾಸ ಕುಟುಂಭದವರು 10 ವರ್ಷಗಳ ಹಿಂದೆಯೇ ತಮ್ಮ ಮಕ್ಕಳ ವಿದ್ಯಾಭ್ಯಾಸ ಕುರಿತು ಮತ್ತು ಕುಟುಂಭದ ಜೀವನ ಆದರ್ಶಪ್ರಾಯವಾಗಿ ಸಾಗಲೆಂದು ಶ್ರೀ ಹನುಮಾನ ದೇವರಿಗೆ ಬೇಡಿಕೊಂಡು ಹರಕೆ ಹೊತ್ತಿದ್ದರಂತೆ ತಮ್ಮ ಅಪೇಕ್ಷೆಯ ಇಚ್ಚೆ ಇಡೇರಿದ್ದರಿಂದ ತಮ್ಮ ಕುಟುಂಭದ ಜೀವನ ಅಪೇಕ್ಷೆಯಂತೆಯೇ ಸಾಗಿದ್ದರಿಂದ ತಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮುಗಿಸಿ ಉನ್ನತ ಸ್ಥಾನಮಾನಕ್ಕೆ ಮುಂದಾಗಿದ್ದರಿಂದ ಹನುಮ ದೇವರಿಗೆ ಬೆಳ್ಳಿ ಗದೆ ನೀಡುವ ಅಪೇಕ್ಷೆಯಂತೆ ಹೊತ್ತ ಹರಕೆಯನ್ನು ಹನುಮ ಜಯಂತಿ ಹುಣ್ಣಿಮೆಯ ದಿನದಂದು ಪ್ರಮುಖ ರಸ್ತೆಯಲ್ಲಿ ಸಾಗಿ ಬರುತ್ತಿದ್ದ ಫಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡ ಈ ಕುಟುಂಭದವರು ಬೆಳ್ಳಿ ಗಧೆಯನ್ನು ಹನುಮಾನ ಮಂದಿರದ ಅರ್ಚಕರಿಗೆ ನೀಡಿ ಭಕ್ತಿಭಾವ ಮೆರೆದಿದ್ದಾರೆ.
ಈ ಸಮಯದಲ್ಲಿ ಶ್ರೀನಿವಾಸ ಸೋನಾರ ಅವರ ಧರ್ಮ ಪತ್ನಿ ಸುನಿತಾ ಶ್ರೀನಿವಾರ, ಸಹೋದರ ಉದಯಕುಮಾರ, ಸೌಮ್ಯ, ಪುತ್ರ ವೇಂಕಟೇಶ ಪ್ರಸಾದ, ವಿನಾಯಕ ಸೋನಾರ ಹಾಗೂ ಅರ್ಚಕರು, ಭಕ್ತವೃಂದದವರು ಪಾಲ್ಗೊಂಡು ಹನುಮ ದೇವರಿಗೆ ತಮ್ಮ ಹರಕೆ ತೀರಿಸಿ ಭಕ್ತಿಭಾವ ಮೆರೆದಿದ್ದಾರೆ.
ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ
ಬಜಾರ ಹನುಮಾನ ಮಂದಿರದ ಜಯಂತ್ಯೋತ್ಸವವು ಕಳೆದ ವರ್ಷದಂತೆ ಈ ಸಲವು ಅತೀ ವಿಜೃಂಬಣೆಯಿಂದ ಜರುಗಿತು.
ಬೆಳಿಗ್ಗೆ ಶ್ರೀ ಹನುಮಾನ ಮೂರ್ತಿಗೆ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮ ನಂತರ ತೋಟ್ಟಿಲು ಕಾರ್ಯಕ್ರಮ ಜರುಗಿತು.
ಫಲ್ಲಕ್ಕಿ ಉತ್ಸವದೊಂದಿಗೆ ಸುಮಂಗಲೆಯರಿಂದ ಗಂಗಸ್ಥಳ ಕಾರ್ಯಕ್ರಮ ಜರುಗಿ ಮಂದಿರ ತಲುಪಿತು. ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ಜರುಗಿತು.
ಈ ಉಸ್ತವದ ನೇತೃತ್ವವನ್ನು ನಾಗಪ್ಪ ಪೂಜಾರಿ, ಹಣಮಂತ ಪೂಜಾರಿ, ಯಂಕಣ್ಣ, ದೇವೇಂದ್ರ, ಸಂತೋಷ, ಭೀಮಣ್ಣ, ಮುತ್ತಣ್ಣ, ಬಸವರಾಜ, ಕೃಷ್ಣಾಜಿ, ನಟರಾಜ, ನವೀನ ಮೊದಲಾದವರು ವಹಿಸಿದ್ದರಲ್ಲದೇ ಈ ಮಹಾ ಪೂಜಾ ಕಾರ್ಯಕ್ರಮದಲ್ಲಿ ತಾಳಿಕೋಟೆಯ ಭಕ್ತಾಧಿಗಳು ಪಾಲ್ಗೊಂಡು ಶ್ರೀ ಹನುಮ ದೇವರ ಕೃಪೆಗೆ ಪಾತ್ರರಾದರು.