ಬೆಳ್ಳಿಗೆದ್ದ ಬಿಂದ್ಯಾ


ಬರ್ಮಿಂಗ್‌ಹ್ಯಾಮ್, ಜು ೩೧- ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟರ್‌ಬಿಂದ್ಯಾರಾಣಿ ದೇವಿ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ೪ನೇ ಪದಕ ತಂದುಕೊಟ್ಟಿದ್ದಾರೆ.
ವೈಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ೫೫ ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಭಾರತದ ಮಹಿಳಾ ವೇಟ್‌ಲಿಫ್ಟರ್ ಬಿಂದ್ಯಾ ಒಟ್ಟಾರೆ ೨೦೨ ಕೆಜಿ ಎತ್ತುವಲ್ಲಿ ಸಫಲರಾಗಿದ್ದು ಬೆಳ್ಳಿ ಪದಕವನ್ನ ಗೆದ್ದು ಬೀಗಿದ್ದಾರೆ.
ಬಿಂದ್ಯಾರಾಣಿ ದೇವಿ ಒಟ್ಟು ೨೦೨ ಕೆ.ಜಿ. ಭಾರವನ್ನ ಎತ್ತಿದ್ದು, ಇದರಲ್ಲಿ ಸ್ನ್ಯಾಚ್‌ನಲ್ಲಿ ಆಕೆಯ ಅತ್ಯುತ್ತಮ ಪ್ರಯತ್ನವೆಂದರೆ ೮೬ ಕೆಜಿ ಆಗಿದೆ. ಆದ್ರೆ ಆಕೆ ಕ್ಲೀನ್ ಮತ್ತು ಜರ್ಕ್‌ನಲ್ಲಿ ೧೧೬ ಕೆಜಿ ತೂಕವನ್ನು ನಿರ್ವಹಿಸಿದರು.
ಕೊನೆಯ ಪ್ರಯತ್ನ ಮಾಡುವ ವೇಳೆಗೆ ಮೂರನೇ ಸ್ಥಾನದಲ್ಲಿದ್ದ ಬಿಂದ್ಯಾದೇವಿ ಕ್ಲೀನ್ ಮತ್ತು ಜರ್ಕ್‌ನಲ್ಲಿ ೧೧೬ ಕೆಜಿ ತೂಕವನ್ನು ಎತ್ತುವ ಮೂಲಕ ವೈಯಕ್ತಿಕ ದಾಖಲೆ ಜೊತೆಗೆ ರಜತ ಪದಕವನ್ನ ಗೆಲ್ಲುವಲ್ಲಿ ಯಶಸ್ವಿಯಾದರು ಇದು ಕಾಮನ್‌ವೆಲ್ತ್‌ಗೇಮ್ಸ್‌ನಲ್ಲಿ ಬಿಂದ್ಯಾರಾಣಿಯ ಮೊದಲ ಪದಕವಾಗಿದೆ. ಬಿಂದ್ಯಾದೇವಿಗಿಂತ ಕೇವಲ ಒಂದು ಕೆ.ಜಿ ಹೆಚ್ಚು ಎತ್ತುವಲ್ಲಿ ಸಫಲಗೊಂಡ ನೈಜೀರಿಯಾದ ಒಲರಿನೊಯ್ ಚಿನ್ನದ ಪದಕವನ್ನು ತಮ್ಮಗಿಸಿಕೊಂಡರು.
ಇದಕ್ಕೂ ಮುನ್ನ ವೇಟ್‌ಲಿಫ್ಟರ್‌ಮೀರಾಬಾಯಿ ಚಾನು ಅವರು ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಒದಗಿಸಿದರು. ಸಂಕೇತ್ ಸರ್ಗರ್ ಮತ್ತು ಗುರುರಾಜ ಪೂಜಾರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು.
ಈ ಮೂಲಕ ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದು ಬೀಗಿದೆ. ಎಲ್ಲಾ ಪದಕಗಳು ವೇಟ್‌ಲಿಫ್ಟಿಂಗ್‌ನಲ್ಲಿ ವಿಭಾಗದಿಂದ ಬಂದಿರುವುದು ವಿಶೇಷ.