ಬೆಳ್ಳಾವಿಯ ರುದ್ರನ ಮಠದ ಸ್ವಾಮೀಜಿ ಲಿಂಗೈಕ್ಯ

ತುಮಕೂರು, ನ. ೭- ತಾಲ್ಲೂಕಿನ ಬೆಳ್ಳಾವಿಯ ಶ್ರೀ ರುದ್ರನ ಮಠದ ಪಟ್ಟಾಧ್ಯಕ್ಷರಾದ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ (೬೧) ಲಿಂಗೈಕ್ಯರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕಳೆದ ೪೫ ವರ್ಷಗಳಿಂದ ಬೆಳ್ಳಾವಿಯ ರುದ್ರನ ಮಠದ ಪಟ್ಟಾಧ್ಯಕ್ಷರಾಗಿದ್ದ ಶ್ರೀಗಳು ನಿನ್ನೆ ಮಧ್ಯಾಹ್ನ ಲಿಂಗೈಕ್ಯರಾಗಿದ್ದು, ಶ್ರೀಮಠದ ಭಕ್ತಾದಿಗಳು ಶ್ರೀಗಳ ನಿಧನಕ್ಕೆ ತೀವ್ರ ಕಂಬನಿ ಮಿಡಿದಿದ್ದಾರೆ.
ಇಂದು ಮಧ್ಯಾಹ್ನ ಶ್ರೀಮಠದ ಆವರಣದಲ್ಲಿ ಲಿಂಗೈಕ್ಯ ಶ್ರೀಗಳ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನೆರವೇರಿತು.