ಬೆಳ್ಳಾರೆಯಲ್ಲಿ ಮೊಬೈಲ್ ಸರ್ವಿಸಸ್ ಅಂಗಡಿಯಲ್ಲಿ ಕಳವು

ಸುಳ್ಯ, ಎ.೩೧- ಬೆಳ್ಳಾರೆ ಮೇಲಿನ ಪೇಟೆ ಸಿಂಡಿಕೇಟ್ ಬ್ಯಾಂಕ್ ಬಳಿಯ ಶ್ರೀ ಮೊಬೈಲ್ ಸರ್ವೀಸಸ್ ಅಂಗಡಿಗೆ ಗುರುವಾರ ರಾತ್ರಿ ಕಳ್ಳರು ನುಗ್ಗಿ ಮೊಬೈಲ್ ಮತ್ತು ನಗದುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.
ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಈ ಅಂಗಡಿಯ ಬೀಗ ಒಡೆದು ನಗದು ಹಾಗೂ ಸರ್ವೀಸ್‌ಗೆ ಇಡಲಾದ ಹಲವು ಮೊಬೈಲ್‌ಗಳನ್ನು ದೋಚಿದ್ದಾರೆ. ಈ ಕುರಿತು ಅಂಗಡಿಯ ಮಾಲಕ ಗುಣ ಇವರು ಬೆಳ್ಳಾರೆ ಪೋಲಿಸ್ ಠಾಣೆಗೆ ಮಾಹಿತಿ ತಿಳಿಸಿದ್ದು ಬೆಳ್ಳಾರೆ ಪೋಲಿಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಪೋಲಿಸರು ಸ್ಥಳಕ್ಕೆ ಆಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಕಳ್ಳತನಗೈದವನ ಪತ್ತೆಗಾಗಿ ಶೋಧ ಕಾರ್ಯ ಪೋಲಿಸರಿಂದ ನಡೆಯುತ್ತಿದೆ.