ಬೆಳ್ಳಂಬೆಳಗ್ಗೆ ಶಿಕ್ಷಕನ ಬರ್ಬರ ಹತ್ಯೆ

ಔರಾದ :ನ.10: ನಗರದ ಹೊರವಲಯದ ನರಸಿಂಗಪೂರ ತಾಂಡಾ ರಸ್ತೆ ಬದಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಅನುಮಾನಾಸ್ಪದ ಶವ ಪತ್ತೆಯಾಗಿದೆ.

ಬೀದರ ನಿವಾಸಿ ವಿಜಯಕುಮಾರ್ ಟಿಳೇಕರ್ ಎಂಬ ವ್ಯಕ್ತಿ ಮೂಲತ ಹಲ್ಬರ್ಗಾ ಗ್ರಾಮದದವರು ಬೀದರ ನಿವಾಸಿಯಾಗಿದ್ದು, ಔರಾದ್ ತಾಲ್ಲೂಕಿನ ಕರಂಜಿ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತ ವ್ಯಕ್ತಿ ಮುಖದ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ಹೆಂಡತಿ ಹಾಗೂ ಇಬ್ಬರೂ ಮಕ್ಕಳನ್ನು ಅಗಲಿದ್ದಾರೆ. ಈ ಕುರಿತು ಔರಾದ ಪೆÇೀಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಿನ ಬಗ್ಗೆ ಇಲ್ಲಿಯವರೆಗೆ ಯಾವುದೇ ನಿಖರವಾದ ಮಾಹಿತಿ ಸಿಕ್ಕಿಲ್ಲ, ಈ ಕುರಿತು ಔರಾದ ಪೆÇೀಲಿಸರು ಆರೋಪಿಗಳ ಹುಡುಕಾಟದಲ್ಲಿದ್ದು ತನಿಖೆ ನಡೆಸಿದ್ದಾರೆ.