ಬೆಳ್ಳಂಬೆಳಗ್ಗೆ ಗರ್ಜಿಸಿದ ಹಿಟಾಚಿ: ಅಕ್ರಮ 50 ಅಂಗಡಿಗಳು ತೆರವು

ನಂಜನಗೂಡು. ಜೂ.04: ನಗರದ ಕಾಲುವೆ ಮೇಲೆ ಸುಮಾರು ವರ್ಷಗಳಿಂದ ಅಕ್ರಮವಾಗಿ ಅಂಗಡಿಗಳನ್ನು ಕಟ್ಟಿಸಿಕೊಂಡು ನೀರಾವರಿ ಇಲಾಖೆಗೆ ತಲೆನೋವಾಗಿ ಮಾರ್ಪಟ್ಟಿತು ಇಂದು ಬೆಳಿಗ್ಗೆ ಕಾವೇರಿ ನೀರಾವರಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಪೆÇಲೀಸ್ ಇಲಾಖೆ ಒಳಗೊಂಡು ಅಕ್ರಮ ಅಂಗಡಿಗಳನ್ನು ತೆರೆವು ಗೊಳಿಸಿದರು.
ಕಾಲುವೆ ಮೇಲೆ ಗೋಬಿ ಮಂಚೂರಿ ಚಿಕನ್ ಅಂಗಡಿಗಳು ಬಿಡಿ ಅಂಗಡಿ ಹೋಟೆಲ್ ಗಳು ಈ ರೀತಿ ಅನೇಕ ಅಂಗಡಿಗಳು ತಲೆ ಎತ್ತಿದವು ಇದರ ಜೊತೆಗೆ ಕಬಾಬ್ ಅಂಗಡಿಗಳ ಮುಂದೆ ಕುಡಿದು ಅಲ್ಲೇ ಮಲಗುತ್ತಿದ್ದರು ಪ್ರತಿದಿನ ಒಂದಲ್ಲ ಒಂದು ಕಿರಿಕಿರಿ ಉಂಟಾಗುತ್ತಿತ್ತು ಇವನ್ನೆಲ್ಲ ಹರಿತ ಕಾವೇರಿ ನೀರಾವರಿ ಇಲಾಖೆ ನಗರಸಭೆ ಪೆÇಲೀಸ್ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಅಂಗಡಿಗಳನ್ನು ತೆರವುಗೊಳಿಸಿದರು ಈ ಸಂದರ್ಭದಲ್ಲಿ ಸಣ್ಣಪುಟ್ಟ ಗೊಂದಲ ಉಂಟಾಯಿತು. ಆದರೂ ಅಧಿಕಾರಿಗಳು ಬಿಡದೆ ಅಂಗಡಿಗಳನ್ನು ತೆರವುಗೊಳಿಸಿದರು.
ನಗರಸಭೆ ಆಯುಕ್ತ ರಾಜಣ್ಣ ಮಾತನಾಡಿ ಅಂಗಡಿಗಳು ಬಹಳ ವರ್ಷಗಳಿಂದ ಇದ್ದವು ಇವುಗಳಿಂದ ಬಹಳ ತೊಂದರೆ ಉಂಟಾಯಿತು ಇದನ್ನೆಲ್ಲಾ ಅರಿತು ಎಲ್ಲಾ ಅಧಿಕಾರಿಗಳು ಸೇರಿ ತೆರವು ಗೊಳಿಸಿದವು ಹಾಗೂ ಸುಭಾಷ್ ಪಾರ್ಕಿನಲ್ಲಿರುವ ತರಕಾರಿ ಮಳಿಗೆಗಳನ್ನು ಹಾಗೂ ಮಟನ್ ಮಳಿಗೆಗಳನ್ನು ಲಾಕ್ ಡೌನ್ ತೆರೆದ ನಂತರ ಈ ಮಳಿಗೆಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು. ಅಂದರೆ ಈಗಾಗಲೇ ತರಕಾರಿ ಮಾರ್ಕೆಟ್ ಉದ್ಘಾಟನೆಗೆ ಮಾಡಬೇಕು ಕೋವಿಡ್ ಮುಗಿದಮೇಲೆ ಶಾಸಕರಿಂದ ದಿನಾಂಕ ಪಡೆದು ಹೊಸ ತರಕಾರಿ ಮಳಿಗೆಯನ್ನು ಉದ್ಘಾಟಿಸಲಾಗಿದೆ ನಂತರ ಸುಭಾಷ್ ಪಾರ್ಕಿನಲ್ಲಿರುವ ತರಕಾರಿ ಮಳಿಗೆ ಆವರನ್ನು ಇವಾಗ ಬಿಲ್ಡಿಂಗ ಸ್ಥಳಾಂತರಿಸಲಾಗುತ್ತದೆ ಎಂದರು ಇದಲ್ಲದೆ ಮಟನ್ ಮಾರ್ಕೆಟ್ ಮಳಿಗೆಗಳನ್ನು ಕೂಡ ಬೇರೆ ಕಡೆ ಮಾಡಲಾಗುತ್ತಿದೆ ಅಲ್ಲಿಯತನಕ ಇವರು ಸುಭಾಸ್ ಪಾರ್ಕಿನಲ್ಲಿ ಇರುತ್ತಾರೆ ನಂತರ ಇವರನ್ನು ಕೂಡ ಬೇರೆ ಕಡೆ ಸ್ಥಳಾಂತರಿಸಲಾಗುತ್ತದೆ. ಈ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಕಾವೇರಿ ನೀರಾವರಿ ಇಲಾಖೆ ಅಧಿಕಾರಿ ಅಶೋಕ್ ನಗರಸಭೆ ಆಯುಕ್ತ ರಾಜಣ್ಣ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್ ಪಟ್ಟಣದ ಪಿಎಸ್‍ಐ ರವಿಕುಮಾರ್ ಪೆÇಲೀಸ್ ರಾಜಪ್ಪ ನಾಗೇಂದ್ರ ಸೇರಿದಂತೆ ಇತರರು ಇದ್ದರು.