
ಬೆಂಗಳೂರು, ಫೆ.23- ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ 109 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದ ಬೆನ್ನಲ್ಲೇ ಬೆಳ್ಳಂದೂರಿನ ಅಂಬಾಲಿಪುರದ ಎಸ್.ಜೆ.ಆರ್ ವಾಟರ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಹತ್ತು ಕೋವಿಡ್ ಪ್ರಕರಣ ವರದಿಯಾಗಿದೆ.
ಕೋವಿಡ್ ಪ್ರಕರಣ ಕಂಡು ಬಂದಿದ್ದರಿಂಸದ
ನಿನ್ನೆ 501 ಜನರ ಪರೀಕ್ಷೆ ನಡೆಸಿ, ಪ್ರಯೋಗಾಲಯಕ್ಕೆ ಸ್ಯಾಂಪಲ್ಸ್ ಕಳಿಸಲಾಗಿತ್ತು. ಇಂದು 405 ಜನರ ಟೆಸ್ಟ್ ನಡೆಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ವಿವರಣೆ ನೀಡಿದ್ದಾರೆ.
ವಾಟರ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಒಟ್ಟು 9 ಟವರ್ಗಳಿದ್ದು, 4 ಟವರ್ಗಳಲ್ಲಿ 10 ಪಾಸಿಟಿವ್ ಪ್ರಕರಣ ಕಂಡು ಬಂ
ದಿದ್ದರಿಂದ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಎಲ್ಲಾ ಒಂಭತ್ತು ಟವರ್ಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಗಂಟಲು ದ್ರವದ ಮಾದರಿ ಸಂಗ್ರಹಕ್ಕೆ 7 ತಂಡಗಳಲ್ಲಿ 20 ನರ್ಸಿಂಗ್ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಸೋಂಕಿತರೊಂದಿಗೆ ಸಂಪರ್ಕಿತರಾದ ಹತ್ತು ಜನರನ್ನು ಪತ್ತೆ ಹಚ್ಚಿ ಐಸೋಲೇಟ್ ಮಾಡಲಾಗಿದೆ. ಅಪಾರ್ಟ್ಮೆಂಟ್ನ ವೆಲ್ಫೇರ್ ಅಸೋಸಿಯೇಷನ್ಗೆ ಕ್ವಾರಂಟೈನ್ ನಿಯಮಗಳನ್ನು ತಿಳಿಸಲಾಗಿದೆ. ಕೋವಿಡ್ ತ್ಯಾಜ್ಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ. 24 ತಾಸಯಗಳು ಸಿದ್ಧವಾಗಿರುವ ಆರೋಗ್ಯ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.