ಬೆಳೆ ಹಾನಿ ರೈತರ ಹೊಲಗಳಿಗೆ ಶಾಸಕ ಪಾಟೀಲ್ ಭೇಟಿ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಜು.31: ತಾಲ್ಲೂಕಿನ ಹಣಕುಣಿ ಗ್ರಾಮದ ರೈತರ ಹೊಲಗಳಿಗೆ ಶಾಸಕ ಸಿದ್ದು ಪಾಟೀಲ್ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.
ಸೋಯಾ, ತೊಗರಿ, ಉದ್ದು, ಹೆಸರು ಬೆಳೆಗಳು ಮಳೆಯಿಂದ ಹಾನಿಯಾಗಿರುವುದನ್ನು ಪರಿಶೀಲಿಸಿದರು. ತಾಲ್ಲೂಕಿನಲ್ಲಿ ರೈತರ ಬೆಳೆ ಹಾನಿಯಾಗಿರುವ ಬಗ್ಗೆ ವರದಿ ಸಿದ್ಧಪಡಿಸಲು ಕೃಷಿ ಅಧಿಕಾರಿಗಳಿಗೆ ತಿಳಿಸಿದರು. ಹುಮನಾಬಾದ್ ಕ್ಷೇತ್ರದಲ್ಲಿ ರೈತರ ಬೆಳೆ ಹಾನಿಗೆ ಪರಿಹಾರಧನ ನೀಡಲು ಸರ್ಕಾರದ ಮೇಲೆ ಒತ್ತಡ ತಂದು ಪರಿಹಾರಧನ ಒದಗಿಸಿಕೊಡಲು ಭರವಸೆ ನೀಡಿದರು.