ಬೆಳೆ ಹಾನಿ : ಬೆಳೆ ವಿಮಾ ಕಂಪನಿಗೆ ರೈತರು ಅರ್ಜಿ ಸಲ್ಲಿಸಲು ಸೂಚನೆ

ದಾವಣಗೆರೆ. ಜು.೨೧; ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಬೆಳೆ ನಷ್ಟ ಕುರಿತು ರೈತರು ಯುನಿವರ್ಸಲ್ ಸೋಂಪೊ ಜನರಲ್ ಇನ್ಸೂರೆನ್ಸ್ ಕಂಪನಿ ಇವರ ದೂರವಾಣಿ ಸಂಖ್ಯೆ:  1800-200-5142 (ಟೋಲ್ ಫ್ರೀ ನಂಬರ್) ಗೆ ಕರೆ ಮಾಡಿ ದೂರು ನೊಂದಾಯಿಸಲು ಕೋರಿದೆ ಅಥವಾ ವಿಮೆ ಕಟ್ಟಿರುವ ರಸೀದಿ, ಜಮೀನಿನ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ನೊಂದಿಗೆ ಅರ್ಜಿಯನ್ನು ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿರುವ ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ ಶೀಘ್ರವಾಗಿ ಸಲ್ಲಿಸಲು ಜಂಟಿ ಕೃಷಿನಿರ್ದೇಶಕರು ತಿಳಿಸಿದ್ದಾರೆ.