ಹುಮಮನಾಬಾದ:ಮಾ.24: ತಾಲ್ಲೂಕಿನ ಮಲ್ಕಾಪುರ ವಾಡಿ ಭಾರಿ ಮಳೆಗೆ ಉಂಟಾಗಿರುವ ಬೆಳೆ ಹಾನಿಯಾದ ಕ್ಷೇತ್ರದ ಗ್ರಾಮಕ್ಕೆ ಕ್ಷೇತ್ರದ ಬಿ.ಜೆ.ಪಿ ಮುಖಂಡರಾದ ಡಾ. ಸಿದ್ದಲಿಂಗಪ್ಪಾ (ಸಿದ್ದು) ಪಾಟೀಲ ರವರು ಭೇಟಿ ನೀಡಿ ಸಂಬಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೆ ದೂರವಾಣಿ ಕರೆ ಮಾಡಿ ತಕ್ಷಣ ರೈತರ ಜಮೀಜನಲ್ಲಿ ಹಾನಿ ಸಂಭವಿಸಿರುವ ರೈತರಿಗೆ ಪರಿಹಾರ ತುಪಿಸುವ ಕಾರ್ಯ ಕೈಗೊಳಿಸಲು ಮುಂದಾಗಬೆಕೇದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಮಾರುತಿ ಮಲ್ಲಣ್ಣಾ, ಕಾಂತೇಶ ಮಾರುತಿ, ಅಲ್ಲಾವುದ್ದೀನ ಅಮೀನಸಾಬ ಶೇಕ, ಸಂಜುಕುಮಾರ ರಾಮಣ್ಣಾ, ಚಂದ್ರಪ್ಪಾ ಭೀಮಶಾ, ಗುರಪ್ಪಾ ಲಕ್ಷ??ಣ, ಬಸವರಾಜ ರಮೇಶ ಪಾಟೀಲ, ರಮೇಶ ಚನ್ನಪ್ಪಾ ಪಾಟೀಲ, ತುಕಾರಾಮ ಗುಂಡಪ್ಪಾ ಮುಂತಾದ ರೈತ ಮುಖಂಡರು ಇದ್ದರು