ಬೆಳೆ ಹಾನಿ ಪರಿಹಾರ ನೀಡಲು ಆಗ್ರಹ

ಅಣ್ಣಿಗೇರಿ,ಆ6: ಧಾರವಾಡ ಜಿಲ್ಲೆ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಈ ಸಲ ಮುಂಗಾರು ಮಳೆ ಉತ್ತಮವಾಗಿ ಆಗಿದ್ದು, ಇದರಿಂದ ರೈತರು ಉತ್ಸಾಹದಿಂದ ಇದ್ದು ಶೇಕಡ 90 ರಷ್ಟು ಭಾಗ ಹೆಸರಿನ ಬೆಳೆ ಬೆಳೆದು ಉತ್ತಮವಾದ ಫಸಲು ಕೈಗೆ ಸಿಗುತ್ತದೆ ಎಂಬ ನಂಬಿಕೆಯಿಟ್ಟ ರೈತನಿಗೆ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆ ಮತ್ತು ಗಾಳಿಯಿಂದಾಗಿ ಹೆಸರಿನ ಬೆಳೆ ನೆಲಕಚ್ಚಿ ಸಂಪೂರ್ಣ ಹಾಳಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ಎರಡು ದಿನಗಳಿಂದ ತಾಲೂಕಿನ ಗ್ರಾಮಗಳಲ್ಲಿ ಸಂಚಾರ ನೋಡಿದಾಗ ದಿಗ್ಭ್ರಮೆ ಕೊಂಡಿದ್ದೇನೆ. ರೈತರ ಸಾಕಷ್ಟು ಖರ್ಚು ಮಾಡಿ ಬೆಳೆಸಿದ ಹೆಸರಿನ ಬೆಲೆ ಸೇರಿದಂತೆ ಎಲ್ಲ ಬೆಳೆಗಳು ಸಾಕಷ್ಟು ಹಾಳಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಮತ್ತು ಈ ಭಾಗದ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಮನವಿ ಮಾಡುತ್ತಿದ್ದು ಖುದ್ದಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಬೆಳೆ ವಿಮೆ ಬಿಡುಗಡೆ ಮಾಡುವುದರ ಜೊತೆಗೆ ಪ್ರತಿ ಎಕರೆಗೆ 30 ರಿಂದ 50 ಸಾವಿರ ರೂಪಾಯಿ ಬೆಳೆ ಹಾನಿ ಪರಿಹಾರ ಶೀಘ್ರದಲ್ಲೇ ರೈತರಿಗೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜೇಶ್ವರ ರಾವ್, ಮಂಜುನಾಥ, ಆನಂದ ಕೆಸರ್ಪ್ಪನವರ ರಾಘವೇಂದ್ರ ವರ್ಣೇಕರ,ಮಂಜುನಾಥ, ಕಲಗುಡಿ, ರವೀಂದ್ರ, ಮಂಜುನಾಥ, ಸಂತೋಷ, ಅಮೃತೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.