ಬೆಳೆ ಹಾನಿ  ಗ್ರಾಮೀಣ ಶಾಸಕರಿಂದ ಪರಿಶೀಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜ.21:  ತಾಲೂಕಿನ ಶಿವಪುರ ಗ್ರಾಮದ ಕೆರೆಯ ಸುತ್ತಮುತ್ತಲ ಪ್ರದೇಶವು. ಕೆರೆಯ ಬಸಿ ನೀರು ಹರಿದು ಬೆಳೆ ಹಾನಿಗೆ ತುತ್ತಾಗಿ ರೈತರ ಬೆಳೆದ ಬೆಳೆ ನಾಶವಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಗ್ರಾಮೀಣ  ಶಾಸಕ ಬಿ.ನಾಗೇಂದ್ರ ಅವರು ಬಿ.ಡಿ ಹಳ್ಳಿ ಗ್ರಾಮದ ಮುಖಂಡರಾದ  ಸತ್ಯನಾರಾಯಣ ರೆಡ್ಡಿ  ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಧನವನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಹಾಗೂ ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.