ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ ಉರುಳು ಸೇವೆ

ಚಿಂಚೋಳಿ,ನ.11-ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಇಂದು ಚಿಂಚೋಳಿಯ ಬಸವೇಶ್ವರ ಸರ್ಕಲ್ ನಿಂದ ತಹಸಿಲ್ ಕಾರ್ಯಾಲಯದವರೆಗೆ ಉರುಳು ಸೇವೆ ಮಾಡುವ ಮುಖಾಂತರ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆ ಉದ್ದೇಶಿಸಿ ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷ ರವಿಶಂಕರ ರೆಡ್ಡಿ ಮುತ್ತಂಗಿ ಮಾತನಾಡಿ ಚಿಂಚೋಳಿ ಹಾಗೂ ಕಾಳಗಿ ತಾಲೂಕಗಳಲ್ಲಿ ಬಿದ್ದ ಭಾರೀ ಮಳೆಯಿಂದ ನದಿಗಳ ಪ್ರವಾಹದಿಂದ ಬೆಳೆ ನಷ್ಟವಾದ ರೈತರಿಗೆ ರಾಜ್ಯ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದು ಇದರ ಬಗ್ಗೆ ಸರ್ಕಾರವು ಗಮನ ಹರಿಸುತ್ತಿಲ್ಲ ಬರಿ ಎಲೆಕ್ಷನ್ ಬಗ್ಗೆ ಗಮನ ಹರಿಸಿರುವ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ರೈತರ ಬಗ್ಗೆ ಗಮನಹರಿಸಬೇಕು, ಕೂಡಲೇ ಚಿಂಚೋಳಿ ತಾಲೂಕ ಮತ್ತು ಕಾಳಗಿ ತಾಲೂಕಿನ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಹಾಗೂ ಚಿಂಚೋಳಿ ತಾಲೂಕಿನ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಉರುಳು ಸೇವೆಯಲ್ಲಿ ಜೆಡಿಎಸ್ ಮುಖಂಡರಾದ ಹನುಮಂತ ಪೂಜಾರಿ. ಮಾಜಿದ ಪಟೇಲ ಅವರು ಜೆಡಿಎಸ್ ಪಕ್ಷದ ಅಧ್ಯಕ್ಷರಿಗೆ ಸಾಥ್ ನೀಡಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಓಮನರಾವ ಕೊರವಿ. ಎಸ್ ಕೆ. ಮುಕ್ತಾರ. ಸಿದ್ದಯ್ಯ ಸ್ವಾಮಿ. ಬಸವರಾಜ ವಾಡಿ.ಮಂಜೂರ ಆಹ್ಮದ ಅಲಿ. ಗೌರಮ್ಮ. ಸಂಗಮೇಶ್ ಪೆದ್ದಿ. ಎಂಕೆ ಮಗದುಮ ಖಾನ. ಮತ್ತು ಜೆಡಿಎಸ್ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿದ್ದರು ಮನೆಗೆ ನುಗ್ಗಿ ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಹನುಮಂತ ಪೂಜಾರಿ. ಮಾಜಿದ ಪಟೇಲ. ಓಮನರಾವ ಕೊರವಿ. ಎಸ್ ಕೆ. ಮುಕ್ತಾರ. ಸಿದ್ದಯ್ಯ ಸ್ವಾಮಿ. ಬಸವರಾಜ ವಾಡಿ.ಮಂಜೂರ ಆಹ್ಮದ ಅಲಿ. ಗೌರಮ್ಮ. ಸಂಗಮೇಶ್ ಪೆದ್ದಿ. ಎಂಕೆ ಮಗದುಮ ಖಾನ. ಮತ್ತು ಜೆಡಿಎಸ್ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿದ್ದರು.