ಬೆಳೆ ಸಾಲ ಹಾಗೂ ರೈತರಿಬ್ಬರಿಗೆ ಟ್ಯಾಕ್ಟರ್ ವಿತರಣೆ

ಚಾಮರಾಜನಗರ, ಏ. 21- ತಾಲೂಕಿನ ಕೆರೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ಬೆಳೆ ಸಾಲವಾಗಿ 4,22,19,000 ರು.ಗಳನ್ನು ರೈತರಿಗೆ ನೀಡಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 134 ರೈತರಿಗೆ 1,35,19,000 ರೂ.ಗಳ ಬೆಳೆ ಸಾಲವನ್ನು ವಿತರಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಹರವೆ ಜಿ.ಪಂ. ಸದಸ್ಯ ಕೆರೆಹಳ್ಳಿ ನವೀನ್ ತಿಳಿಸಿದರು.
ತಾಲೂಕಿನ ಕೆರೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ನೂತನ ಸದಸ್ಯರಿಗೆ ಬೆಳೆ ಸಾಲ ವಿತರಣೆ ಹಾಗೂ ರೈತರಿಬ್ಬರಿಗೆ ಟ್ಯಾಕ್ಟರ್ ವಿತರಣಾ ಕಾರ್ಯಕ್ರಮದಲ್ಲಿ ರೈತ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ಹಾಗೂ ಈಗ ಒಂದು ವರ್ಷದಿಂದ ಕೆರೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಸದಸ್ಯರಿಗೆ ಸಾಲ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸಹಕಾರ ಬ್ಯಾಂಕಿನಿಂದ ರೈತರು, ಕೃಷಿ ಕಾರ್ಮಿಕರು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ನೆರವು ನೀಡಲಾಗಿದೆ. 4.22 ಕೋಟಿ ರೂ.ಗಳ ಸಾಲ ವಿತರಣೆ ಮಾಡಿ ಸಂಘದ ವ್ಯಾಪ್ತಿಗೆ ಬರುವ 7 ಗ್ರಾಮಗಳ ರೈತರ ಸವಾರ್ಂಗೀಣ ಅಭಿವೃದ್ದಿಗೆ ಅವಿರತವಾಗಿ ಶ್ರಮಿಸಲಾಗುತ್ತಿದೆ. sಸಂಘದಲ್ಲಿ 620 ಮಂದಿ ಸದಸ್ಯರ ಪೈಕಿ 329 ಮಂದಿ ರೈತರಿಗೆ ಬೆಳೆ ಸಾಲ ನೀಡಲಾಗಿದೆ ಎಂದು ನವೀನ್ ತಿಳಿಸಿದರು.
ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿಯು ನಮ್ಮ ಸಹಕಾರ ಸಂಘದಿಂದ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಂಘದಿಂದ ಸಾಲ ಪಡೆದುಕೊಂಡವಲ್ಲಿ ಪರಿಶಿಷ್ಟ ಜಾತಿಯ 129 ಮಂದಿ ರೈತರು ಪ್ರಥಮ ಸ್ಥಾನದಲ್ಲಿದ್ದಾರೆ. ಪರಿಶಿಷ್ಟ ಪಂಗಡದ 25 ಮಂದಿ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಇತರೇ ಎಲ್ಲಾ ಸಮುದಾಯಗಳ 175 ಮಂದಿ ರೈತರಿಗೆ ಸಂಘದಿಂದ ಸಾಲ ನೀಡಿ, ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಿ, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧನೆ ಮಾಡಿದÀ್ದು, ಸಹಕಾರ ಸಚಿವರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಕೆರೆಹಳ್ಳಿ ಸಹಕಾರ ಸಂಘಕ್ಕೆ ನೀಡಿದ ಬೆಂಬಲ ಹಾಗೂ ಅವರ ಕೊಡುಗೆ ಅಪಾರವಾಗಿದೆ. ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಜೊತೆಗೆ ಗ್ರಾಮದ ಸಹಕಾರ ಸಂಘಕ್ಕೆ ವಿಶೇಷವಾಗಿ ಹೆಚ್ಚಿನ ಸಾಲಸೌಲಭ್ಯಗಳು ದೊರೆಯಲು ಪ್ರಮುಖ ಕಾರಣಕರ್ತರಾಗಿದ್ದರು ಎಂದು ನವೀನ್ ಬ್ಯಾಂಕ್ ಬೆಳೆವಣಿಗೆಯಲ್ಲಿ ಎಚ್‍ಎಸ್‍ಎಂ ಅವರ ಸೇವೆಯನ್ನು ಸ್ಮರಿಸಿಕೊಂಡರು.
ರಿಯಾಯಿತಿ ದರದಲ್ಲಿ ಟ್ಯಾಕ್ಟರ್ ಖರೀದಿಸಲು ಸಂಘದಿಂದ ಇಬ್ಬರು ರೈತರಿಗೆ ಅವಕಾಶ ನೀಡಿದ್ದು, ಮೇಗಲಹುಂಡಿ ಗ್ರಾಮದ ಬಸವರಾಜು ಅವರ ಮಗ ಶಿವಣ್ಣ ಹಾಗೂ ತಮ್ಮಣ್ಣ ಅವರಿಗೆ 11 ಲಕ್ಷ ರೂ. ವೆಚ್ಚದಲ್ಲಿ ಸಾಲ ನೀಡಿ ಟ್ಯಾಕ್ಟರ್ ಖರೀದಿಸಲಾಗಿದೆ. ಈಗಾಗಲೇ ಸಂಘ ಸ್ವಂತ ಕಟ್ಟಡವನ್ನು ಹೊಂದಿದ್ದು, ಮಳಿಗೆಗಳನ್ನು ಉದ್ಗಾಟನೆ ಮಾಡಲಾಗಿದೆ. ಸುಮಾರು 20 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು, ಇನ್ನು ಕಚೇರಿ ಮತ್ತು ಸಭಾಂಗಣ ಕಾಮಗಾರಿ ಅಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕಟ್ಟಡವನ್ನು ಉದ್ಗಾಟಿಸುವ ಜೊತೆಗೆ ಸಂಘವನ್ನು ಗಣಕೀಕೃತಗೊಳಿಸಿ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಬೇಕೆಂಬ ಉದ್ದೇಶವನ್ನು ಹೊಂದಲಾಗಿದೆ ಎಂದು ನವೀನ್ ತಿಳಿಸಿದರು.
ಸಂಘದ ಉಪಾÀಧ್ಯಕ್ಷ ಪುಟ್ಟಸಿದ್ದಯ್ಯ, ನಿರ್ದೇ ಶಕರಾದ ಬಸವರಾಜು, ಮಹೇಶ್‍ಪಟೇಲ್, ಎಂ.ವಿ. ನಾಗರಾಜು, ಮಹದೇವಸ್ವಾಮಿ, ರಾಜ ಕುಮಾರ್, ಕೆಂಪರಾಜು, ಲತಾ, ಗುರು ಸಿದ್ದನಾಯಕ, ಮಲ್ಲಾಜಮ್ಮ, ಬೀರೇಗೌಡ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸಂದೀಪ್. ಸಿಇಓ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.