ಬೆಳೆ ಸಾಲ ವಿತರಣೆಗೆ 200 ಕೋಟಿ:ರಾಜಕುಮಾರ ತೇಲ್ಕೂರ

ಕಲಬುರಗಿ :ಮೇ.27: ಮುಂಗಾರು ಹಂಗಾಮಿನ ಬಿತ್ತನೆ ಇನ್ನಿತರ ಚಟುವಟಿಕೆಗಳು ಶುರುವಾಗಿದ್ದರಿಂದ ರೈತರಿಗೆ ಅನುವು ಮಾಡಿಕೊಡಲು ಈ ಸಲ 200 ಕೋಟಿ ರೂ.ಗಳನ್ನು ಬೆಳೆ ಸಾಲ ನೀಡಲು ನಿಗದಪಡಿಸಿದ್ದು, ಸಾಲ ಬಟವಡೆ ಆರಂಭಿಸಲಾಗಿದೆ ಎಂದು ಕಲಬುರಗಿ-ಯಾದಗಿರಿ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷರು ಆಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಲ ವಿತರಿಸಲಾಗುವುದು. ಅದರಲ್ಲೂ ಈ ಸಲ ಹೊಸ ರೈತರಿಗೆ (ಇದುವರೆಗೂ ಸಾಲ ಪಡೆದುಕೊಳ್ಳದವರಿಗೆ) ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಲಾಗುವುದು. ಸಾಲ ಮರು ಪಾವತಿ ಮಾಡಿದವರಿಗೆ ಸಾಲ ನೀಡಲಾಗುವುದು ಎಂದು ಆಡಳಿತ ಮಂಡಳಿ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.
ಈ ಸಲ ರೈತರಿಗೆ ಬಡ್ಡಿ ರಹಿತವಾಗಿ 12 ತಿಂಗಳ ಅವಧಿಗೆ ಕನಿಷ್ಠ 50 ಸಾ.ರೂ.ಗಳಿಂದ 3 ಲP್ಷÀ ರೂ.ಗಳವರೆಗೆ ಬೆಳೆ ಸಾಲ ನೀಡಲಾಗುವುದು. ರೈತರು ಆಯಾ ಸೊಸೈಟಿಗಳ ಮೂಲಕ ಅರ್ಜಿಗಳನ್ನು ಸಲ್ಲಿಸಿ ಸೂಕ್ತ ದಾಖಲೆಗಳನ್ನು ನೀಡಿ ನಿಯಮಗಳಂತೆ ಅರ್ಜಿ ಸಲ್ಲಿಸಿ ಬೆಳೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಅಪೆಕ್ಸ್ ಬ್ಯಾಂಕ್ 200 ಕೋ.ರೂ. ನೀಡಿದ್ದು, ಇನ್ನೂ ಹೆಚ್ಚುವರಿಯಾಗಿ 200 ಕೋ.ರೂ.ನೆರವು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಎರಡ್ಮೂರು ತಿಂಗಳಲ್ಲಿ ಮಂಜೂರಾತಿ ಸಿಗುವ ನಿರೀಕ್ಷೆಯಿದೆ. ಅದಿಷ್ಟು ಹಣ ಬಿಡುಗಡೆಯಾದರೆ, ಇನ್ನಷ್ಟು ರೈತರಿಗೆ ಸಾಲ ನೀಡಲು ಸಾಧ್ಯವಾಗಲಿದೆ ಎಂದು ತೇಲ್ಕೂರ ತಿಳಿಸಿದರು.
ಅಪೆಕ್ಸ್ ಬ್ಯಾಂಕಿನಿಂದ 500 ಕೋ.ರೂ. ಹಾಗೂ ನಬಾರ್ಡ್ ಬ್ಯಾಂಕಿನಿಂದ 450 ಕೋ.ರೂ. ನೆರವು ಕೋರಲಾಗಿದೆ. ಈ ಹಣ ಬಿಡುಗಡೆಯಾದರೆ ಡಿಸಿಸಿ ಬ್ಯಾಂಕಿನಿಂದ ರೈತರ ಜತೆಗೆ ವರ್ತಕರಿಗೂ ಸಹ ವಾಣಿಜ್ಯಸಾಲ ನೀಡಲು ಅನುವು ಆಗಲಿದೆ. ರೈತರಿಗೂ ಸಹ ಮಧ್ಯಮ ಅವಧಿ ಸಾಲ ವಿತರಿಸಲಾಗುವುದು. ಕೆಲವೇ ತಿಂಗಳಲ್ಲಿ ವಾಣಿಜ್ಯ ಸಾಲ ನೀಡುವುದು ಶುರುವಾಗಲಿದೆ. ಹೀಗಾಗಿ ವರ್ತಕರು ಸಹ ಡಿಸಿಸಿ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆಯಬೇಕು. ಠೇವಣಿ ಇಡಬೇಕು ವ್ಯಾಪಾರ ಆದಾಯ ಇತ್ಯಾದಿ ನೋಡಿಕೊಂಡು 30 ಲಕ್ಷ ರೂ.ಗಳವರೆಗೆ ಸಾಲ ವಿತರಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯP್ಷÀ ಸುರೇಶ ಸಜ್ಜನ್, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ, ಜನರಲ್ ಮ್ಯಾನೇಜರ್ ಮುತ್ತುರಾಜ್, ಬ್ಯಾಂಕಿನ ನಿರ್ದೇಶಕರಾದ ಶರಣಬಸಪ್ಪ ಪಾಟೀಲ್ ಅಷ್ಟಗಿ, ಗೌತಮ ಪಾಟೀಲ್, ಅಶೋಕ ಸಾವಳೇಶ್ವರ, ನಿಂಗಣ್ಣ ದೊಡ್ಡಮನಿ ಇತರರಿದ್ದರು.

ಈ ವರ್ಷ ಜಿಲ್ಲೆಯಲ್ಲಿ ಆರಂಭಗೊಂಡಿರುವ ಹೊಸ ಸೊಸೈಟಿಗಳಲ್ಲಿ ಸಹ ರೈತರಿಗೆ ಸಾಲ ವಿತರಣೆ ಮಾಡಲಾಗುವುದು. ಅದಕ್ಕಾಗಿ ಡಿಸಿಸಿ ಬ್ಯಾಂಕ್ ಪ್ರತಿಯೊಂದು ಸೊಸೈಟಿಗೆ 50 ಲಕ್ಷ ರೂ. ನೀಡಲಿದೆ. ರೈತರಿಗೆ ನೀಡುವ ಸಾಲ ಪ್ರಮಾಣ ಸಹ ಹೆಚ್ಚಿಸಲಾಗಿದೆ. ಕನಿಷ್ಠ 50 ಸಾ.ರೂ. ಬೆಳೆ ಸಾಲ ನೀಡಲಾಗುವುದು. ಹೊಸ ರೈತರಿಗೆ ಸಾಲ ನೀಡಲಾಗುವುದು.

| ರಾಜಕುಮಾರ ಪಾಟೀಲ್ ತೇಲ್ಕೂರ ಡಿಸಿಸಿ ಬ್ಯಾಂಕ್ ಅಧ್ಯಕ್ಷ

8 ಕೋಟಿ ರೂ. ಲಾಭದಲ್ಲಿ ಡಿಸಿಸಿ ಬ್ಯಾಂಕ್
ವರ್ಷಕ್ಕೆ 56 ಕೋ.ರೂ. ನಷ್ಟದಲ್ಲಿದ್ದು ಮುಚ್ಚುವ ಹಂತಕ್ಕೆ ಬಂದಿದ್ದ ಡಿಸಿಸಿ ಬ್ಯಾಂಕ್ ಈಗ 8 ಕೋ.ರೂ.ಲಾಭಕ್ಕೆ ಬಂದಿದೆ. ತಾವು ಅಧ್ಯ್ಕಷರಾಗಿ ಅಧಿಕಾರ ವಹಿಸಿಕೊಂಡ ನಂತರ ಎಲ್ಲ ಸಹಕಾರದೊಂದಿಗೆ ಕೆಲಸ ಮಾಡುವ ಮೂಲಕ ಮುಚ್ಚಲಿದ್ದ ಬ್ಯಾಂಕಿಗೆ ಶಕ್ತಿ ತುಂಬಿಸಿ ಅಭಿವೃದ್ಧಿಗೊಳಿಸಿರುವುದಕ್ಕೆ ಬ್ಯಾಂಕ್ ಲಾಭದಲ್ಲಿ ಬಂದಿರುವುದೇ ಸಾಕ್ಷಿಯಾಗಿದೆ ಎಂದು ಅಧ್ಯಕ್ಷ ರಾಜಕುಮಾರ ತೇಲ್ಕೂರ ಹೇಳಿದರು.
ಕರೊನಾ ನಂತರ ಕಲಬುರಗಿಯಲ್ಲಿರುವ ಬ್ಯಾಂಕಿನ ಮುಖ್ಯ ಕಚೇರಿ ಕಟ್ಟಡ ಹೊಸದಾಗಿ ನಿರ್ಮಿಸಲಾಗುವುದು. ಎಲ್ಲ ಶಾಖೆಗಳನ್ನು ಆಧುನಿಕರಣಗೊಳಿಸವುದು.ಹೊಸ ತಾಲ್ಲೂಕುಗಳಲ್ಲಿಯೂ ಡಿಸಿಸಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಲಾಸಗುವುದು ಎಂದು ತಿಳಿಸಿದರು.