ಬೆಳೆ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಸರ್ಕಾರದ ಬಡ್ಡಿ ರಿಯಾಯಿತಿ ಪಡೆದುಕೊಳ್ಳಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.24: ಕೃಷಿ ಆಧಾರಿತ ಸಾಲಗಳನ್ನು ಪಡೆದುಕೊಳ್ಳುವ ರೈತರು ನೇರವಾಗಿ ಬ್ಯಾಂಕ್ ಅಧಿಕಾರಿಗಳೊಂದಿಗೆ ವ್ಯವಹಾರವನ್ನು ನಡೆಸಿ, ಬೆಳೆ ಸಾಲವನ್ನು ಮಂಜೂರಾತಿ ಪಡೆದುಕೊಂಡು ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಪಡೆದುಕೊಳ್ಳ ಬಹದು ಎಂದು ಕ.ಗ್ರಾ.ಬ್ಯಾಂಕ್ನ ಜಿಲ್ಲಾ ಪ್ರಾದೇಶಿಕ ಅಧಿಕಾರಿ ಸಲೀಂ ತಿಳಿಸಿದರು.
ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಶುಕ್ರವಾರ ನಡೆದ “ಕಿರು ಸಾಲ ಉತ್ಸವ” ದಲ್ಲಿ ಮಾತನಾಡಿದರು.
ರೈತರಿಗೆ ಬೆಳೆ ಸಾಲ, ಬಂಗಾರ ಆಭರಣ ಸಾಲ, ಗೃಹ ಸಾಲ, ವಾಹನ ಸಾಲ ಅತಿ ಕಡಿಮೆ ಸಮಯದಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಸಾಲ ನೀಡುವುದು, ಬೆಳೆ ಸಾಲಕ್ಕೆ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವ ರೈತರಿಗೆ ಪಿಎಂಜೆಜೆವೈ, ಪಿಎಂಎಸ್ಬಿವೈ ಅಡಿಯಲ್ಲಿ ವಿಮಾ ಸೌಲಭ್ಯವಿರುತ್ತದೆ, 3 ಲಕ್ಷದ ವರೆಗಿನ ಬೆಳೆ ಸಾಲಕ್ಕೆ ಯಾವುದೇ ಪರಿಶೀಲನಾ ಶುಲ್ಕ ಇರುವುದಿಲ್ಲ, ಗ್ರಾಹಕರು ಹತ್ತಿರ ಶಾಖೆಗೆ ಭೇಟಿ ನೀಡಿ, ಜೂ.01ರಿಂದ ಸೆ.30ರ ವರೆಗೆ ನಡೆಯುವ ಉತ್ಸವದಲ್ಲಿನ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿಹೊಂದುವಂತೆ ತಿಳಿಸಿದರು.
ಸಹಾಯಕ ಪ್ರಾದೇಶಿಕ ಅಧಿಕಾರಿ ವೀರೇಶ, ಶಾಖೆ ವ್ಯವಸ್ಥಾಪಕ ನರೇನ ಮನೆಸಮುದ್ರಂ ಇದ್ದರು.

One attachment • Scanned by Gmail