ಬೆಳೆ ಸಮೀಕ್ಷೆ: ಶೇ ೩೦ ಮೇಲ್ಪಟ್ಟು ಬೆಳೆ ನಷ್ಟವಾದರೆ ಪರಿಹಾರ- ಅಮರೇಶಪ್ಪ

ಸಿರವಾರ.ನ.೨೫-ತಾಲೂಕಿನಲ್ಲಿ ಅಕಾಲಿಕ ಸುರಿದ ಮಳೆಯಿಂದಾಗಿ ನಷ್ಟವಾದ ಬೆಳೆ ಸಮೀಕ್ಷೆಯನ್ನು ಕೃಷಿ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಜಂಟಿ ಸರ್ವೆ ಮಾಡುತ್ತಿದ್ದಾರೆ.
ತಾಲೂಕಿನ ಗಣದಿನ್ನಿ, ಭಾಗ್ಯನಗರ ಕ್ಯಾಂಪಿನ ವ್ಯಾಪ್ತಿಯಲ್ಲಿ ಸಿರವಾರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮರೇಶಪ್ಪ ಹಾಗೂ ಗ್ರಾಮಲೇಕ್ಕಾಧಿಕಾರಿ ವಿರೇಶ ಅವರು ಕಳೆದ ಮೂರು ದಿನಗಳಿಂದ ಜಂಟಿಯಾಗಿ ಸರ್ವೆ ಮಾಡುತ್ತಿದ್ದಾರೆ.
ಈ ಕುರಿತು ಕೃಷಿ ಅಧಿಕಾರಿ ಅಮರೇಶಪ್ಪ ಮಾತನಾಡಿ ಸರ್ಕಾರದ ಆದೇಶದಂತೆ ಭತ್ತ, ಹತ್ತಿ, ಜೋಳ ಸೇರಿ ಇನ್ನಿತರ ಬೆಳೆಗಳು ಅಕಾಲಿಕ ಮಳೆಯಿಂದಾಗಿ ನಷ್ಟವಾಗಿರುವದ ಬಗ್ಗೆ ಕಂದಾಯ- ಕೃಷಿ ಇಲಾಖೆ ಜಂಟಿಯಾಗಿ ಸರ್ವೆ ಮಾಡುತ್ತಿದೆ. ಶೇಕಡಾ ೩೦ ಕಿಂತಲೂ ಹೆಚ್ಚು ಬೆಳೆ ನಷ್ಟವಾದರೆ ಸರ್ಕಾರದಿಂದ ಪರಿಹಾರ ಸೌಲಭ್ಯಗಳು ದೊರೆಯುತ್ತವೆ. ಅಧಿಕಾರಿಗಳು ಜಮೀನುಗಳಿಗೆ ಬಂದಾಗ ಸೂಕ್ತ ದಾಖಲಾತಿಗಳನ್ನು ನಿಡುವ ಮೂಲಕ ಸಹಕರಿಸಿ ಎಂದರು.