
ಕೂಡ್ಲಿಗಿ. ಅ.7 :- ಈ ಭಾರಿ ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಅನೇಕ ಮಳೆಯಾಶ್ರಿತ ತಾಲೂಕು ಪ್ರದೇಶಗಳಲ್ಲಿ ಬೆಳೆದ ಬೆಳೆ ಸಂಪೂರ್ಣ ಒಣಗಿ ಹಾನಿಯಾಗುತ್ತಿದ್ದೂ ಕುಡಿಯಲು ಸಹ ನೀರಿಗೆ ಬರದ ಛಾಯೆ ಆವರಿಸುತ್ತಿದೆ, ಜಾನುವಾರುಗಳಿಗೂ ಮೇವಿನ ಹಾಗೂ ಕುಡಿಯುವ ನೀರಿನ ಬರ ಗೋಚರಿಸುತ್ತಿದ್ದುದರ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲಬೊಮ್ಮನಹಳ್ಳಿಯಲ್ಲಿ ಇಂದು ಮಧ್ಯಾಹ್ನ ಭರಮಪ್ಪ ಎಂಬ ರೈತರ ಬೆಳೆದ ಬೆಳೆ ವೀಕ್ಷಣೆ ಮಾಡಿದರು ಅಲ್ಲದೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಕ್ಷೇತ್ರದ ಮಳೆಯಾಶ್ರಿತ ಹಾಗೂ ಹಿಂದುಳಿದ ತಾಲೂಕಿನ ಬರದ ಚಿತ್ರಣವನ್ನು ಕೇಂದ್ರದ ಬರದ ಅಧ್ಯಯನ ತಂಡಡೆದುರು ಬಿಚ್ಚಿಟ್ಟರು.
ಕೇಂದ್ರ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ ರಾಜಶೇಖರ್ ನೇತೃತ್ವದಲ್ಲಿ ಪಶುಸಂಗೋಪನೆ ಇಲಾಖೆ ನಿರ್ದೇಶಕ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಅವರಿರುವ ಬರ ಅಧ್ಯಯನದ ಎರಡನೇ ತಂಡ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲಬೊಮ್ಮನಹಳ್ಳಿ ರೈತ ಭರಮಪ್ಪ ಅವರ ನಾಲ್ಕು ಎಕರೆ ಹೊಲದಲ್ಲಿ ಹಾಕಲಾಗಿದ್ದ ಮೆಕ್ಕೆಜೋಳ ಬೆಳೆ ಸಂಪೂರ್ಣ ಒಣಗಿ ನಾಶವಾಗಿದ್ದು ಇದನ್ನು ಕೃಷಿ ಇಲಾಖೆ ಗುರುತಿಸಿದಂತೆ ಅಧ್ಯಯನ ತಂಡ ಇಂದು ಮಧ್ಯಾಹ್ನ ಬರ ವೀಕ್ಷಣೆ ಮಾಡಿದರು ರೈತ ಹಾಕಿದ ಬೆಳೆ ಹಾಳಾಗಿರುವ ಹಾಗೂ ಸಾಲ ಮಾಡಿ ಬಿತ್ತಿದ ಬೆಳೆ ಮಳೆ ಇಲ್ಲದೆ ನಾಶವಾಗಿರುವ ಕುರಿತು ರೈತ ಭರಮಪ್ಪ ತಂಡಕ್ಕೆ ತಿಳಿಸಿದರು
ಕ್ಷೇತ್ರದ ಬರದ ಚಿತ್ರಣ ಬಿಚ್ಚಿಟ್ಟ ಕೂಡ್ಲಿಗಿ ಶಾಸಕ : ರಾಜ್ಯದಲ್ಲಿ ಡಾ ನಂಜುಂಡಪ್ಪ ವರದಿಯಂತೆ ಅತೀ ಹಿಂದುಳಿದ ಹಾಗೂ ಮಳೆಯಾಶ್ರಿತ ಪ್ರದೇಶವಾಗಿರುವ ಕೂಡ್ಲಿಗಿ ತಾಲೂಕು ಈ ಭಾರಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕುವಾರು ಬಿತ್ತಿದ ಎಲ್ಲಾ ಬೆಳೆಗಳು ಒಣಗಿ ಸಂಪೂರ್ಣ ಹಾಳಾಗಿದ್ದು ರೈತ ಕಷ್ಟ ಹೇಳತೀರದು ಅಲ್ಲದೆ ಅನೇಕ ರೈತರು ಸಾಲ ಶೂಲ ಮಾಡಿ ಬೀಜ ಗೊಬ್ಬರ ಹಾಕಿದ್ದಾರೆ ಮಳೆ ಇಲ್ಲದೆ ಬೆಳೆ ಹಾಳಾಗಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಜಾನುವಾರುಗಳಿಗೂ ನೀರು ಮೇವಿನ ಕೊರತೆ ಇದ್ದುಕಾಣುತ್ತಿದೆ ಗೋಶಾಲೆ ತೆರೆಯಬೇಕು ಮತ್ತು ರೈತರ ಬೆಳೆ ಹಾಳಾಗಿರುವ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದಲ್ಲಿ ರೈತರಿಗೆ ಪರಿಹಾರ ಸಿಗುವಂತಾಗಬೇಕು ಎಂದು ಕೇಂದ್ರ ಬರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ತಾವು ಸಹ ಕೂಡ್ಲಿಗಿ ತಾಲೂಕಿನಲ್ಲಿ ಈ ಹಿಂದೆ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದು ತಾಲೂಕಿನ ಸಂಪೂರ್ಣ ಮಾಹಿತಿ ಇದ್ದು ಮಳೆಯಾಶ್ರಿತ ಪ್ರದೇಶವಾಗಿದೆ ಇಲ್ಲಿನ ರೈತರ ಕಷ್ಟಗಳ ಬಗ್ಗೆ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವಾಕರ ಸೇರಿದಂತೆ ಜಿಲ್ಲೆಯ ಇತರೆ ಅಧಿಕಾರಿಗಳು ಮತ್ತು ಕೂಡ್ಲಿಗಿ ಕಂದಾಯ ಇಲಾಖೆಯ ತಹಸೀಲ್ದಾರ್ ಜಗದೀಶ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣ ಅಧಿಕಾರಿ ವೈ ರವಿಕುಮಾರ, ಕೃಷಿ ಅಧಿಕಾರಿ ಸುನೀಲಕುಮಾರ, ಶ್ರವಣಕುಮಾರ, ಸಾವಿತ್ರಿ ಉಪಸ್ಥಿತರಿದ್ದರು.