ಬೆಳೆ ವಿಮೆ ವಿಚಾರದಲ್ಲಿ ವೈಯಕ್ತಿಕ ಟೀಕೆಗಿಳಿದ ಸಚಿವ ಭಗವಂತ ಖೂಬಾ, ಶಾಸಕ ಈಶ್ವರ್ ಖಂಡ್ರೆ

ಬೀದರ್: ನ.8:ಕೋಟ್ಯಂತರ ರೂಪಾಯಿ ವಿಮೆ ಪಡೆದಿರುವ ಯುನಿರ್ವಸಲ್ ಸೊಂಪೆÇ ಜನರಲ್ ಇನ್ಶೂರೆನ್ಸ್ ಕಂಪನಿ ಬೀದರ್ ಜಿಲ್ಲೆಯ 8 ಸಾವಿರ ರೈತರ ಅರ್ಜಿ ತಿರಸ್ಕರಿಸಿರುವ ವಿಷಯ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಿಡಿ ಹೊತ್ತಿಸಿತು.

ಈ ವಿಷಯವಾಗಿಯೇ ಕೇಂದ್ರ ರಸೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಧ್ಯೆ ಜಟಾಪಟಿ ನಡೆಯಿತು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರು ಹಾಗೂ ಶಾಸಕರ ನಡುವಿನ ಚರ್ಚೆ ವಿಕೋಪಕ್ಕೆ ಹೋಗಿ ವೈಯಕ್ತಿಕ ಟೀಕೆಗಳಿಗೂ ಕಾರಣವಾಯಿತು.

ಶಾಸಕ ಈಶ್ವರ ಖಂಡ್ರೆ ಮಾತನಾಡಿ, ‘ಬೆಳೆ ಹಾನಿಯಾದ ಸಂದರ್ಭದಲ್ಲಿ ಯುನಿರ್ವಸಲ್ ಸೊಂಪೆÇ ಜನರಲ್ ಇನ್ಶೂರೆನ್ಸ್ ಕಂಪನಿಯು ಟೋಲ್‍ಫ್ರೀ ನಂಬರ್ ಬಂದ್ ಮಾಡಿತು. ವೆಬ್‍ಸೈಟ್ ಬ್ಲಾಕ್ ಮಾಡಿತು. ಹೀಗಾಗಿ ರೈತರಿಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡು ಕಂಪನಿ ಬೆಳೆ ನಷ್ಟ ಪರಿಹಾರ ನೀಡಲು ನಿರಾಕರಿಸಿದೆ. ಇದು ರೈತರ ಲೂಟಿ ಹೊಡೆಯುವ ಕಂಪನಿ’ ಎಂದು ಗಂಭೀರ ಆರೋಪ ಮಾಡಿದರು.

‘ಕಂಪನಿ ರೈತರಿಂದ ಪಡೆದ ? 186 ಕೋಟಿಯಲ್ಲಿ ? 84 ಕೋಟಿ ಮಾತ್ರ ಕೊಟ್ಟು ಉಳಿದ ಹಣ ಲಾಭ ಮಾಡಿಕೊಂಡಿದೆ. ನನ್ನ ಹೇಳಿಕೆ ತಪ್ಪು ಎನ್ನುವುದು ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ. ನಾನು ಯಾರ ವಿರುದ್ಧವೂ ವೈಯಕ್ತಿಕ ಆರೋಪ ಮಾಡಿಲ್ಲ. ಕೇಂದ್ರ ಸಚಿವರು ಕಂಪನಿ ಪರವಾಗಿ ವಕಾಲತು ವಹಿಸಿಕೊಳ್ಳುವ ಅಗತ್ಯವಿಲ್ಲ. ರೈತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

‘ಯುನಿರ್ವಸಲ್ ಸೊಂಪೆÇ ಜನರಲ್ ಇನ್ಶೂರೆನ್ಸ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಕೆಜಿಎಫ್ ಮಾದರಿಯಲ್ಲಿ ರಾಜ್ಯ ಸರ್ಕಾರವೇ ರೈತರಿಂದ ವಿಮೆ ಕಂತು ಪಡೆದು ಪರಿಹಾರ ಕೊಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ‘ಯಾವುದೇ ಸಣ್ಣ ವಿಷಯ ಪ್ರಸ್ತಾಪಿಸಿ ಕಂಪನಿ ವಿರುದ್ಧ ಸಮಗ್ರವಾಗಿ ಆರೋಪ ಮಾಡುವುದು ಸರಿಯಲ್ಲ. ಕಂಪನಿ ನಿಯಮ ಬದ್ಧವಾಗಿಯೇ ವಿಮಾ ಕಂತು ಪಡೆದು ರೈತರಿಗೆ ಬೆಳೆ ಪರಿಹಾರ ಪಾವತಿಸಿದೆ’ ಎಂದು ಸಮರ್ಥಿಸಿಕೊಂಡರು.

‘2016ರಿಂದ 2022ರ ವರೆಗೆ ರೈತರಿಂದ ? 78 ಕೋಟಿ ವಿಮೆ ಪಡೆದು ?461 ಕೋಟಿ ಪಾವತಿಸಿದೆ. ಹಿಂದಿನ ಸರ್ಕಾರ ರೈತರಿಂದ ಶೇಕಡ 14ರಷ್ಟು ವಿಮೆ ಹಣ ಪಡೆಯುತ್ತಿತ್ತು. ಮೋದಿ ಸರ್ಕಾರ ಶೇಕಡ 2ಕ್ಕೆ ಇಳಿಸಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಕೆಎಸ್‍ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಹಜ್ ಕಮಿಟಿ ಅಧ್ಯಕ್ಷ ರೌಫೆÇೀದ್ದಿನ್ ಕಚೇರಿವಾಲೆ, ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ್, ಜಿಲ್ಲಾ ಆರೋಗ್ಯಾಧಿಕಾರಿ ರತಿಕಾಂತ ಸ್ವಾಮಿ, ಬ್ರಿಮ್ಸ್ ನೀರ್ದೇಶಕ ಶಿವಕುಮಾರ ಶೆಟಕಾರ, ಅಬಕಾರಿ ಇಲಾಖೆಯ ಮಂಜುನಾಥ ಇದ್ದರು.