ಬೆಳೆ ವಿಮೆ ಮಂಜೂರು ಮಾಡಲು ಆಗ್ರಹಿಸಿ ಮನವಿ

ಕಲಬುರಗಿ:ಮೇ.18: 2023 ನೇ ಸಾಲಿನ ಯುನಿವರ್ಸಲ್ ಸೊಂಪೆÇದ ಬೆಳೆ ಪ್ರಯೋಗದ ವಿಮೆ ಮಂಜುರು ಮಾಡಬೇಕೆಂದು ರೈತ ಮಿತ್ರ ಸೇವಾ ಸಂಘದ ವತಿಯಿಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ರೈತರು ಬರ ಪೀಡಿತರಾಗಿದ್ದು, ಜನರು ಬರಗಾಲದಿಂದ ತತ್ತರಿಸಿದ್ದು, ಆರ್ಥಿಕ ಪರಿಸ್ಥಿ ತುಂಬಾ ಚಿಂತಾಜನಕವಾಗಿದ್ದರಿಂದ ಹಾಗೂ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದ್ದು, ಕಳೆದ ವರ್ಷ ಡಿಸೆಂಬರ ತಿಂಗಳಿನಲ್ಲಿ ಬೆಳೆ ಪ್ರಯೋಗವಾಗಿದ್ದು 6 ತಿಂಗಳು ಕಳೆದರೂ ಕೂಡ ವಿಮಾ ಮೊತ್ತ ರೈತರ ಖಾತೆಯಲ್ಲಿ ಜಮಾವಾಗಿಲ್ಲದರಿಂದ ಕೂಡಲೇ ಇದರ ಪರಿಹಾರ 15 ದಿನಗಳ ಒಳಗಾಗಿ ಬಿಡುಗಡೆ ಮಾಡಿಸಬೇಕು ಒಂದು ವೇಳೆ ಬೆಡಿಕೆಗಳು ಇಡೆರಿಸದಿದರೆ ಮುದ್ದಿನ ದಿನಗಳಲ್ಲಿ ರೈತ ಮಿತ್ರ ಸೇವಾ ಸಂಘದ ವತಿಯಿಂದ ಜಿಲ್ಲಾ ಹಾಗೂ ತಾಲ್ಲೂಕಾಧ್ಯಂತÀ ಬ್ರಹತ್ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದರು.
ರೈತ್ರ ಮಿತ್ರ ಸೇವಾ ಸಂಘದ ರಾಜ್ಯಾಧ್ಯಕ್ಷ ಸದಾನಂದ ಗಂಗಾರಾಮ ಪವಾರ, ರಾಜು ಚವ್ಹಾಣ, ಸಂಕೇತ ಪವಾರ, ಕಿರಣ ಜಾಧವ, ರಾಹುಲ್ ಭಾವಿಕಟ್ಟಿ, ವಿನೋದ ಪವಾರ, ಮಿಥುನ್ ರಾಠೋಡ, ಈರಣ್ಣ ಹತ್ತರಕಿ, ಯುವರಾಜ ರಾಠೋಡ ಇದ್ದರು.