ಬೆಳೆ ವಿಮೆ ಪಾವತಿಗೆ ಜೂ.೩೦ ಕೊನೆದಿನ

ಜಗಳೂರು.ಜೂ.೧೧; 2021-22 ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸ ಗೊಳಿಸುತ್ತಿರುವ  ವಿಮಾ ಕಂಪನಿಗೆ ಎಸ್.ಬಿ.ಐ  ಜನರಲ್ ಇನ್ಸುರೇಶನ್ ಕಂಪನಿಯನ್ನು ದಾವಣಗೆರೆ ಜಿಲ್ಲೆಗೆ ನಿಗದಿಪಡಿಸಲಾಗಿರುತ್ತದೆ ಪ್ರಸ್ತುತ ಮುಂಗಾರಿಗೆ ಜಗಳೂರು ತಾಲೂಕಿನಲ್ಲಿ ಅಡಿಕೆ ಹಾಗೂ ದಾಳಿಂಬೆ ಬೆಳೆಗಳ ವಿಮೆ ವ್ಯಾಪ್ತಿಯಡಿಯಲ್ಲಿ ಅಧಿಸೂಚನೆಗಳು ಸಲಾಗುತ್ತದೆ ವಿಮಾ ಪಾವತಿಸಲು ಕಡೆಯ ಜೂ. 30 ರಂದು ಆಗಿರುತ್ತದೆಆದ ಕಾರಣ ರೈತರು ಅಡಿಕೆ ಬೆಳೆ ವಿಮೆಯನ್ನು ಪ್ರತಿ ಹೆಕ್ಟೇರಿಗೆ ಪ್ರೀಮಿಯಂ ಮೊತ್ತ 6400 ಹಾಗೂ ದಾಳಿಂಬೆ ಬೆಳೆಯ ವಿಮೆ ಮಾತ್ತ 6350 ರೂಪಾಯಿಗಳನ್ನು ರೈತರ ಮೇಲಿನ ಬೆಳೆಗಳಿಗೆ ವಿಮೆ ಮಾಡಿಸಲು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ವೆಂಕಟೇಶ ಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಅಥವಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಲು ಕೋರಲಾಗಿದೆ