ಬೆಳೆ ವಿಮೆ ನೀಡಲು ರೈತರ ಮನವಿ

ಅಳ್ನಾವರ, ನ 11- ಸನ್ 2019-20 ನೇ ಸಾಲಿನ ಬೆಳೆ ವಿಮೆ ತಕ್ಷಣ ಬಿಡುಗಡೆ ಮಾಡಿ ಎಂದು ಆಗ್ರಹಿಸಿ ಅಳ್ನಾವರ ಮತ್ತು ಧಾರವಾಡ ತಾಲ್ಲೂಕಿನ ರೈತರು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಾಶೀನಾಥ ಬದ್ರನ್ನವರ ಅವರಿಗೆ ಮನವಿ ಸಲ್ಲಿಸಿದರು.
ಅತೀವೃಷ್ಟಿ, ಕೊರೊನಾ ಹಾವಳಿಯಿಂದ ರೈತರ ಬದುಕು ದುಸ್ಥರವಾಗಿದೆ. ರೈತರು ಹಣಕಾಸಿನ ತೊಂದರೆ ಅನುಭವಿಸುತ್ತಿದ್ದಾರೆ ಕಾರಣ ತಕ್ಷಣವೆ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ವಿನಂತಿಸಿದರು.
ಸನ್ 2020= 21 ನೇ ಸಾಲಿನ ಮಾವು ಬೆಳೆ ವಿಮೆ ತುಂಬುವ ಅವಧಿ ಇದೆ ತಿಂಗಳು 15 ಕ್ಕೆ ಇದೆ. ಗ್ರಾಮೀನ ಭಾಗದ ಹಲವಡೆ ಸರ್ವರ ತೊಂದರೆ ಕಾಡುತ್ತಿದೆ. ಸಧ್ಯ ರೈತರು ಭತ್ತ ಕಟಾವು ಕಾರ್ಯದಲ್ಲಿ ಮುಗ್ನರಾಗಿದ್ದಾರೆ ಹಾಗೂ ಈ ತಿಂಗಳಲ್ಲಿ ಸಾಕಷ್ಟು ಸರ್ಕಾರಿ ರಜೆಗಳು ಬಂದಿವೆ ಕಾರಣ ನವೆಂಬರ 30 ರವರೆಗೆ ಮಾವು ಬೆಳೆ ವಿಮೆ ತುಂಬುವ ಅವಧಿ ವಿಸ್ತಿರಿಸಿ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಶಿವಾಜಿ ಡೊಳ್ಳಿನ, ಯಲ್ಲಪ್ಪ ಮುಮ್ಮಿಗಟ್ಟಿ, ಕರೆಪ್ಪಾ ಯತ್ತಿನಗುಡ್ಡ, ಆಕಾಶ ಜನಕಾಟಿ, ಮಹಾಬಳೇಶ್ವರ ನರಗುಂದ ಇದ್ದರು.