ಬೆಳೆ ಪರಿಹಾರ ಉಚಿತ ಬಿತ್ತನೆ ಬೀಜಕ್ಕೆ ದಂಗಾಪೂರ ಮನವಿ

ಚಿಂಚೋಳಿ,ಸೆ.10- ತಾಲೂಕಿನ ಹೆಚ್ಚು ಮಳೆಬಿದ್ದ ಹಿನ್ನಲೆಯಲ್ಲಿ ಮುಂಗಾರು ಬೆಳೆಗಳು ಸಂಪೂರ್ಣ ನೀರುಪಾಲಾಗಿವೆ ಸರಕಾರ ಪ್ರತಿ ಹೆಕ್ಟೇರ್‍ಗೆ 13600 ರೂ.ಬೆಳೆ ಪರಿಹಾರ ನೀಡಬೇಕು. ಹಿಂಗಾರು ಬಿತ್ತನೆಗಾಗಿ ರೈತರಿಗೆ ಉಚಿತ ಬೀಜ ವಿತರಣೆ ಮಾಡಬೇಕು ಎಂದು ಕಲ್ಬುರ್ಗಿ ಜಿಲ್ಲೆಯ ಕೃಷಿ ಸಮಾಜದ ಅಧ್ಯಕ್ಷರಾದ ಸಿದ್ರಾಮಪ್ಪ ದಂಗಾಪೂರ, ಅವರು ಆಗ್ರಹಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿ ಜರುಗಿಸಿ ಮಾತನಾಡಿ, ತಾಲೂಕಿನ ವಿವಿಧ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿಯಾದ ಬಗ್ಗೆ ಪರಿಶೀಲನೆ ಮಾಡಿದ್ದೇನೆ ಈ ವರ್ಷ ವಾಡಿಕೆಕ್ಕಿಂತ ಹೆಚ್ಚು ಮಳೆಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಸರಕಾರಿ ನೌಕರರಿಗೆ ಹೇಗೆ ರೈತರಿಗೂ ಇಂಕ್ರೀಮೆಂಟ್ ಮಾಡಿ ಟಿಎ ಡಿಎ ಹೆಚ್ಚು ಮಾಡುತ್ತಾರೋ ಅದೇ ರೀತಿ ವರ್ಷಕ್ಕೆ ಇಂಕ್ರೀಮೆಂಟ್ ಪರಿಹಾರ ಮೊತ್ತ ಹೆಚ್ಚು ಮಾಡಿದಂತೆ ಪ್ರತಿ ಹೆಕ್ಟೇರ್ ಬೆಳೆ ಪರಿಹಾರವನ್ನು ಹೆಚ್ಚಿಸಬೇಕು ಈಗ ಕೊಡಲಾಗುತ್ತಿರುವ ಹೆಕ್ಟರಗೆ 6800 ಪರಿಹಾರವನ್ನು ಈ ವರ್ಷ 13,600 ರೂ. ಹೆಚ್ಚಿಸಿ ಪರಿಹಾರ ನೀಡಬೇಕು ಅವರು ಎಂದು ಒತ್ತಾಯಿಸಿದರು.
ಈಗಾಗಲೇ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಬೆಳೆ ಪರಿಹಾರ ಸಮೀಕ್ಷೆ ಮಾಡಿದ್ದು, ಕೇಂದ್ರದಿಂದ ಬಂದ ತಂಡವು ಸರ್ವೆ ಮಾಡಿ ವರದಿ ಸಲ್ಲಿಸಿದೆ. ನಾನು ಪ್ರತಿ ತಾಲೂಕಿನ ರೈತರ ಹೊಲಗಳಿಗೆ ಭೇಟಿ ನೀಡಿ ನಷ್ಟದ ಬಗ್ಗೆ ವರದಿ ಪಡೆದು ಸರಕಾರಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಚಿಂಚೋಳಿ ಕೃಷಿ ಇಲಾಖೆ ಅನುದಾನ: ರೈತರ ಸಲಕರಣೆಗಳಿಗಾಗಿ 2019-20 ನೇ ಸಾಲಿನಲ್ಲಿ 1.4ಕೋಟಿ ನ ಸಾಲಿನಲ್ಲಿ ಅನುದಾನ ನೀಡಿದ್ದು,2020-21 158,31 ಲಕ್ಷ ಅನುದಾನ, 2021-22ನೇ ಸಾಲಿನಲ್ಲಿ 169,34ಲಕ್ಷ ಅನುದಾನ ಬಿಡುಗಡೆ ಆಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳಾದ ವೀರಶೇಟ್ಟಿ ರಾಠೋಡ್, ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಿಂಚೋಳಿಯ ತಾಲ್ಲೂಕಾ ಕೃಷಿಕ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಬುಶೆಟ್ಟಿ, ಅವರು ಕೂಡ ಚಿಂಚೋಳಿ ತಾಲೂಕ ರೈತರ ಕಷ್ಟಗಳ ಬಗ್ಗೆ ಮಾತನಾಡಿ ಕೃಷಿ ಇಲಾಖೆ, ತೋಟಗಾರಿಕೆ, ಹಾಸು ಇಲಾಖೆ ವತಿಯಿಂದ ಕೂಡ ಪಟ್ಟಣದ ರೈತರಿಗೆ ಸಹ ಉದ್ಯೋಗ ಖಾತ್ರಿ ಯೋಜನೆ ಯಡಿಯಲ್ಲಿ
ಕಾಮಗಾರಿ ಮಾಡಲು ಸರ್ಕಾರ ಆದೇಶ ನೀಡಬೇಕು ಎಂದು ಮಲ್ಲಿಕಾರ್ಜುನ ಬುಶೆಟ್ಟಿ, ಒತ್ತಾಯಿಸಿದರು.