ಬೆಳೆ ಪರಿಹಾರಕ್ಕೆ ಆಗ್ರಹಿಸಿ ಮನವಿ

ಗುರುಮಠಕಲ್:ಸೆ.22: ರೈತರಿಗೆ ಅತಿವೃಷ್ಟಿಯಿಂದ ಬೆಳೆ ನಾಶವಾಗಿದ್ದು ಪರಿಹಾರ ಒದಗಿಸುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರರು ಶರಣಸವ ರಾಣಪ್ಪ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಉಪಾಧ್ಯಕ್ಷ ರಾದ ಮಲ್ಲಿಕಾರ್ಜುನ ಸತ್ಯಂಪೇಟ ಅವರು ಮಾತನಾಡಿ ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿದ್ದು ಸರ್ಕಾರ ಶೀಘ್ರವೇ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. ಸತತವಾಗಿ ಐದಾರು ವರ್ಷಗಳಿಂದಲೂ ಅತಿಮಳೆಯಿಂದಾಗಿ ಕಂಗಲಾಗುತ್ತಿರುವ ಕೃಷಿಕರು ಯಾವುದೇ ಪರಿಹಾರಗಳು ಇಲ್ಲದೆ ವಂಚಿತರಾಗುತ್ತಿದ್ದಾರೆ. ಅತಿವೃಷ್ಟಿಯಿಂದ ಹಾಳದ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ಮತ್ತು ಹೊಲಗಳಿಗೆ ಹೊಗುವ ರಸ್ತೆ ಗಳನ್ನು ದುರಸ್ತಿ ಗೊಳಿಸುವುದು ಹಾಗೂ ರೈತರಿಗೆ 12ಗಂಟೆ ವಿದ್ಯುತ್ ಹಾಗೂ ಹಳೆಯದಾದ ಎಲ್ಲಾ ವಿದ್ಯುತ್ ಉಪಕರಣಗಳನ್ನು ನವಿಕರಿಸಬೇಕು ರಾಜ್ಯ ಸರ್ಕಾರ ದಿಂದ ಅಥವಾ ಜಿಲ್ಲಾಡಳಿತದಿಂದ ಸರಿಯಾದ ಪರಿಹಾರ ಗಳು ದೊರಕದೆ ರೈತರು ಪರಿಹಾರ ವಂಚಿತರಾಗಿ ಕೃಷಿಯನ್ನು ಕೈಬಿಡುವಂತಹ ಪರಿಸ್ಥಿತಿ ಒದಗಿದ್ದರು ಕೂಡ ಸ್ಪಂದಿಸದಿರುವದು ಮತ್ತಷ್ಟು ದಿಗುಲುಂಟಾಗಿದೆ ಅತಿಯಾದ ಮಳೆಯಿಂದ ಸುಮಾರು ಹಳ್ಳಿಗಳಲ್ಲಿ ಮನೆಗಳು ನೆಲಸಮ ಗೊಂಡಿದ್ದು ನಿರಾಶ್ರಿತರಿಗೆ ಪರಿಹಾರ ಕಲ್ಪಿಸಬೇಕು ಎಂದರು. ಸಂಘದ ರಾಜ್ಯ ಅಧ್ಯಕ್ಷರಾದ ನಾಗರತ್ನಮ್ಮ ವಿ.ಪಾಟೀಲ್. ಜಿಲ್ಲಾ ಅಧ್ಯಕ್ಷ ರಾದ ಶರಣು ವಿ. ಮಂದರವಾಡ.ರಾಜ್ಯ ಉಪಾಧ್ಯಕ್ಷ ರಾದ ಮಲ್ಲಿಕಾರ್ಜುನ ಸತ್ಯಂಪೇಟ. ತಾಲೂಕು ಅಧ್ಯಕ್ಷ ರಾದ ಭೀಮ ರಾಯ ಯೆಲ್ಹೇರಿ.ಗೌರವ ಅಧ್ಯಕ್ಷ ರಾದ ಭೀಮಪ್ಪ ಕೆಳಮನಿ. ತಾಲೂಕು ಪ್ರಧಾನ ಕಾರ್ಯದರ್ಶಿ ಮಣಿವರ್ಧನರೆಡ್ಡಿ. ತಾಲೂಕು ಕಾರ್ಯದರ್ಶಿ ಗಳಾದ ವಿಜಯ ಕುಮಾರ ತೊರಣತಿಪ್ಪ. ತಾಲೂಕು ಖಜಾಂಚಿ ಕಿಸಾನ್ ಚೌವ್ಹಾಣ್. ಪ್ರತಾಪ್.ಗುಂಡೇಶ ಇತರರು ಇದ್ದರು.