ಬೆಳೆ ನಾಶ: ಪರಿಶೀಲನೆ

ಲಕ್ಷ್ಮೇಶ್ವರ, ನ23: ಕಳೆದ ವಾರ ಸತತ ಸುರಿದ ಮಳೆಯಿಂದಾಗಿ ತಾಲೂಕಿನ ಯತ್ನಳ್ಳಿ ಮತ್ತು ಯಳವತ್ತಿ ಗ್ರಾಮಗಳಲ್ಲಿ ಬೆಳೆದು ನಿಂತಿದ್ದ ಹತ್ತಿ ಮತ್ತು ಶೇಂಗಾ ಬೆಳೆ ನಾಶವಾಗಿದ್ದು ಸೋಮವಾರ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಹಾನಿಗೀಡಾದ ಪ್ರದೇಶಗಳನ್ನು ಪರಿಶೀಲಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪಿ ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಶಶಿಕಾಂತ್ ಕೋಟಿಮನಿ, ಸಹಾಯಕ ಕೃಷಿ ನಿರ್ದೇಶಕರಾದ ಮಹೇಶ್ ಬಾಬು, ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚಂದ್ರಶೇಖರ್ ಗೌಡ ನರಸಮ್ಮನವರ ಸೇರಿದಂತೆ ಅನೇಕರಿದ್ದರು.