ಬೆಳೆ ನಷ್ಟ: ಎಕರೆಗೆ ೨೫ ಸಾವಿರ ಪರಿಹಾರ ನೀಡಲು ಒತ್ತಾಯ

ರಾಯಚೂರು, ನ.೧೫, ಕಳೆದ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಬೆಳೆಗಳು ಸಂಪೂರ್ಣ ನಾಶವಾಗಿದ್ದು ರೈತರಿಗೆ ಪ್ರತಿ ಎಕ್ಟರಿಗೆ ೨೫ ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಜಾಗೃತ ರೈತ ಸಂಘ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲೆಯ್ಯಾದಂತ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆನಷ್ಟವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ ಎಂದು ದೂರಿದರು. ರೈತರ ಸಾಲ ಮನ್ನಾ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದರು.
ಅತಿವೃಷ್ಟಿಯಿಂದ ಬೆಳೆ ನಷ್ಟಕ್ಕೀಡಾದ ಜಿಲ್ಲೆಯ ರೈತರಿಗೆ ೧೫ ದಿನಗಳೊಳಗಾಗಿ ಎಕರೆಗೆ ೨೫ ಸಾವಿರ ರೂಪಾಯಿಯಂತೆ ಪರಿಹಾರ ಧನ ನೇರ ಖಾತೆ ಜಮಾ ಮಾಡಬೇಕು.
ಬೆಳೆನಷ್ಟ ಸಮೀಕ್ಷೆ ಅರೆ-ಬರೆಯಾಗಿದ್ದು, ಬಿಟ್ಟುಹೋದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಖಾತೆಗೆ ಹಣ ಹಾಕಬೇಕು.
ಸಣ್ಣ, ಅತಿ ಸಣ್ಣ ಹಿಡುವಳಿದಾರರು ಸರ್ಕಾರಿ ಬ್ಯಾಂಕ್ ಮತ್ತು ಎಎಸ್‌ಎಸ್‌ಎನ್‌ಗಳಲ್ಲಿ ಪಡೆದ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಬೀಜ, ರಸಗೊಬ್ಬರ ಹಾಗೂ ಇನ್ನಿತರ ಕೃಷಿ ಸಂಬಂಧಿತ ಯಂತ್ರಗಳಿಗೆ ಸಬ್ಸಿಡಿ ಪ್ರಮಾಣ ಹೆಚ್ಚಿಸಬೇಕು,
ಸಕಾಲದಲ್ಲಿ ಭತ್ತ ಹಾಗೂ ಇನ್ನಿತರೆ ಧವಸ, ಧಾನ್ಯಗಳ ಖರೀದಿ ಕೇಂದ್ರಗಳನ್ನು ತೆರೆದು ವೈಜ್ಞಾನಿಕ ಬೆಂಬಲ ಬೆಲೆಯಲ್ಲಿ ಉತ್ಪನ್ನಗಳನ್ನು
ಖರೀದಿಸಬೇಕು. ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ನಂ.೫೦, ೫೩, ೫೭ ಅಡಿ ಅರ್ಜಿ ಹಾಕಿದ ಬಗಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಕೊಡಬೇಕು.
ಜಾಗತಿಕ ಬಂಡವಾಳ ಹೂಡಿಕೆದಾರರ (ಜಿಮ್) ಸಮಾವೇಶದಲ್ಲಿ ಕೈಗೊಂಡ ಕೃಷಿ ಮತ್ತು ರೈತ ವಿರೋಧಿ ಎಲ್ಲ ಒಪ್ಪಂದಗಳನ್ನು ಕೈಬಿಡಬೇಕು.
ಈ ಸಂದರ್ಭದಲ್ಲಿ ಅಬ್ರಮ್ ಜಾಗೀರ, ಲಿಂಗಣ್ಣ ಮಾಡಗಿರಿ, ರಾಜೇಂದ್ರ ಕಲ್ಲೂರು, ಭೀಮರಾಯ ಸೇರಿದಂತೆ ಉಪಸ್ಥಿತರಿದ್ದರು.