ಬೆಳೆ ಜಲಾವತ-ಸಂಕಷ್ಟದಲ್ಲಿ ರೈತರು

ಕೋಲಾರ,ನ.೨೨:ಇತ್ತೀಚೆಗೆ ಸುರಿದ ಮಳೆಯಿಂದ ತಾಲೂಕಿನ ಯಾನಾದಹಳ್ಳಿ ಗ್ರಾಮದಲ್ಲಿ ಹಲವು ರೈತರ ಬೆಳೆದ ಬೆಳೆಗಳಿಗೆ ನೀರು ಹರಿದು ಜಲಾವೃತಗೊಂಡು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಜಿಲ್ಲೆಯಾದ್ಯಂತ ಸುರಿದ ಮಳೆಗೆ ಕೆರೆಗಳು ಕೋಡಿ ಹರಿಯುತ್ತಿದ್ದು, ಪಾಲಾರ್ ನದಿ ಸೇರುವ ಮೂಲಕ ನದಿ ನೀರಿನ ಹರಿವು ಹೆಚ್ಚಾಗಿ ಪಾಲಾರ್ ನದಿ ದಂಡೆಯಲ್ಲಿರುವ ಗ್ರಾಮದ ಪ್ರದೇಶದಲ್ಲಿ ಬೆಳೆದಿದ್ದ, ಟಮೋಟೋ, ಹೂಕೋಸು, ರಾಗಿತೆನೆ, ಅವರೆ, ತೊಗರಿ ಬೆಳೆಗಳು ನೀರಿನಲ್ಲಿ ಸಂಪೂರ್ಣವಾಗಿ ಮುಳಗಿದೆ. ಫಸಲು ಕೈಗೆ ಬರುವ ಹೊತ್ತಿನಲ್ಲಿ ಮಳೆಯಿಂದ ಬೆಳೆ ನಷ್ಟವಾಗಿದ್ದು ರೈತರು ಪರಿತಪಿಸುವಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.