ಬೆಳೆ ಕಳದುಕೊಂಡ ರೈತರಿಗೆ ಪರಿಹಾರಕ್ಕೆ ಆಗ್ರಹಸಿ ಕಾಂಗ್ರೆಸ್ ಪ್ರತಿಭಟನೆ

ಸಿಂಧನೂರು.ನ.೨೨-ಮಳೆಗೆ ರೈತರ ಬೆಳೆ ನಷ್ಟವಾಗಿದ್ದು ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಸಿ ನಗರದಲ್ಲಿ ಕಾಂಗ್ರೆಸ್ ಪಕ್ಷ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಪಕ್ಷದ ಮುಖಂಡರು ತಹಶೀಲ್ದಾರ್ ಕಛೇರಿಗೆ ಆಗಮಿಸಿ ಮಳೆಗೆ ಭತ್ತ, ಕಡಲೆ, ಹತ್ತಿ, ಜೋಳ ಸೇರಿದಂತೆ ಇನ್ನೀತರ ಬೆಳೆಗಳು ಹಾಳಾಗಿದ್ದು ಕೂಡಲೆ ಬೆಳೆ ಸಮೀಕ್ಷೆ ನಡೆಸಿ ಪ್ರತಿ ಏಕರೆಗೆ ೨೫ಸಾವಿರ ರೂ ಪರಿಹಾರ ನೀಡಬೇಕು ಎಂದು ಬರೆದ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿದರು. ಪಕ್ಷದ ಮುಖಂಡರಾದ ಬಸವರಾಜ ಹೀರೆಗೌಡ್ರ, ಲಿಂಗಪ್ಪ ದಡೇಸುಗೂರು, ಬಾಬುಗೌಡ ಬಾದರ್ಲಿ, ಶ್ರೀನಿವಾಸ ಚಿಟ್ಟೂರಿ, ಖಾಜಿ ಮಲಿಕ್, ಜಾಫರ್ ಜಾಗಿರದಾರ್, ಸಾಯಿರಾಮ ಕೃಷ್ಣ, ನಿರುಪಾದೆಪ್ಪ ವಕೀಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.