ಬೆಳೆ ಕಟಾವು ಸಮಯ ನಿಗದಿಗೆ ರೈತರು ಒತ್ತಾಯ

ರಾಯಚೂರು, ಜ.೧೬- ಜೋಳ ಸೇರಿದಂತೆ ಇತರ ಬೆಳೆಗಳ ಕಟಾವು ಮಾಡಲು ಸಮಯ ನಿಗದಿ ಪಡಿಸುವಂತೆ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಒತ್ತಾಯಿಸಿದರು
ತಾಲೂಕಿನ ಚಂದ್ರಬಂಡ ಹೋಬಳಿಯ ಕೂಡ್ಲರು ಗ್ರಾಮದ ಸರ್ವೆ ನಂಬರ್ ೭೫ ೯೭, ೩ ಹಾಗೂ ೯೭, ೨ ರಲ್ಲಿ ಜೋಳ ಹಾಗೂ ಅಜ್ಞಾನ ಬೆಳೆಗಳು ಬೆಳೆಯಲಾಗಿದೆ. ೨೦ ದಿನಗಳು ತಡೆದರೆ ಬೆಳೆಗಳು ಕಟಾವು ಮಾಡುಬಹುದು. ಆದರೆ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದವರು
ಬೆಳೆಗಳನ್ನು ನಾಶ ಮಾಡುತ್ತೇವೆ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಬೆಳೆ ಕಟಾವು ಮಾಡಲು ಸಮಯ ನಿಗದಿ ಪಡಿಸುವಂತೆ ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದವರು ಅವರು ಬೆಳೆಗಳನ್ನು ನಾಶ ಮಾಡುತ್ತೇವೆ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಬೆಳೆ ಕಟಾವು ಮಾಡಲು ಸಮಯ ನಿಗದಿ ಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕೂಡೂರು ಗ್ರಾಮದ ಸರ್ವೆ ನಂಬರ್ ೭೫, ೯೭, ೩ ಹಾಗೂ ೯೭,೨ ರಲ್ಲಿ ಜೋಳ ಹಾಗೂ ಅಜ್ಞಾನ ಬೆಳೆಗಳು ಎಂದೆಂದೂ ಬೆಳೆಯದ ರೀತಿಯಲ್ಲಿ ಫಲವತ್ತಾಗಿ ಬೆಳೆದಿರುತ್ತವೆ
ಸುಮಾರು ೮ – ೯ ಲಕ್ಷ ಬೆಳೆಯಾಗಿದ್ದು ರೈತರಿಗೆ ಅತ್ಯಂತ ಸಂತಸದ ವಿಷಯವಾಗಿರುತ್ತದೆ ಆದರೆ ಈಗ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದವರು ಏಕಾಏಕಿ ಬಂದು ಕೈಗೆ ಬಂದ ಬೆಳೆಯನ್ನು ಬಾಯಿಗೆ ಬರದಂತೆ ನಾಶ ಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲೇ ರೈತರ ಜಮೀನಿನ ಬೆಲೆ ಅತ್ಯಂತ ಕಡಿಮೆ ಪರಿಹಾರ ಮೊತ್ತದಲ್ಲಿ ವಶಪಡಿಸಿಕೊಂಡಿದ್ದು ಕೊಟ್ಟಂತ ಅಲ್ಪಸ್ವಲ್ಪ ಪರಿಹಾರವೂ ಇನ್ನೂ ಕೊಟ್ಟಿರುವುದಿಲ್ಲ ರೈತರಿಗೆ ಕೈಗೆ ಬಂದಂತ ಬೆಳೆಯನ್ನು ಸಹ ಬೊಲ್ಲೋಜರ್ ನಿಂದ ಕೆಡಿಸುತ್ತೇವೆ ಎಂದು ಹೇಳುತ್ತಿದ್ದಾರೆ ನಮಗೆ ಕೇವಲ ಅವರು ತಮ್ಮಲ್ಲಿ ಮನವಿ ಮಾಡಿಕೊಳ್ಳಲು ೧ ದಿನದ ಸಮಯವಕಾಶವನ್ನು ಮಾತ್ರ ನೀಡಿರುತ್ತಾರೆ. ದಯಾಳದ ತಾವು ನಮ್ಮ ಬೆಳೆಗಳು ಕಟಾವು ಆಗುವವರಿಗೆ ಸಮಯಾವಕಾಶವನ್ನು ಕೊಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕ್ರಿಷ್ಟಪ್ಪ, ವಿಜಯಕುಮಾರ, ಮಹೇಶ, ರಾಮಯ್ಯ, ಸೇರಿದಂತೆ ಉಪಸ್ಥಿತರಿದ್ದರು.