ಬೆಳೆ ಉಳಿಸಿಕೊಳ್ಳಲು ರಾತ್ರಿ ಜಮೀನು ಕಾವಲು


ಸಂಜೆವಾಣಿ ವಾರ್ತೆ
ಸಂಡೂರು :ಸೆ:4 ಸಂಡೂರು ತಾಲ್ಲೂಕಿನಾದ್ಯಂತ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ವರುಣ ಕೃಪಾ ಕಟಾಕ್ಷಕ್ಕಾಗಿ ರೈತರು ಬಕಪಕ್ಷಿಯಂತೆ ಕಾದುಕುಳಿತಿದ್ದಾರೆ. ಕಾಳುಕಟ್ಟುವ ಹಂತದಲ್ಲಿದ್ದು, ಹಂದಿಗಳ ಉಪಟಳ ವಿಪರೀತವಾಗುತ್ತಿದ್ದು, ಬೆಳೆಗಳ ರಕ್ಷಣೆಗೆ ರೈತರು ಹರಸಾಹಸ ಪಡುತ್ತಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ರಾತ್ರಿ ಜಮೀನಿನ ಕಾವಲಿಗಾಗಿ ದಾಪು ಹಾಕುತ್ತಿದ್ದಾರೆ. ತಾಲ್ಲೂಕಿನ ಭುಜಂಗನಗರ ನರಿಸಂಗಾಪುರ, ಲಕ್ಷ್ಮೀಪುರ, ಮತ್ತಿರ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದು, ಬೆಳೆಗಳನ್ನು ಕಾಡುಹಂದಿಗಳಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ರೈತರಿಗೆ ಕಾಡು ಹಂದಿಗಳ ಕಾಟ ಸಾವಾಲಾಗಿ ಪರಣಮಿಸಿದೆ. ರಾತ್ರಿ ಟೈಯರಿಗೆ ಬೆಂಕಿ ಹಚ್ಚುವುದು ಪಟಾಕಿ ಸಿಡುಸುವುದುಮುಂತಾದ ಅನೇಕ ಕಾಯಕ್ರಮಗಳನ್ನು ಕೈಗೊಂಡಿದ್ದರು, ಕಾಡಂಚಿನಲ್ಲಿರುವ ಜಮೀನುಗಳಿಗೆ ಏಕಾಏಕಿ ದಾಳಿ ಮಾಡುವ ಕಾಡು ಹಂದಿಗಳು ಕಾಲಿಗೆ ಕೈಗೆ ಸಿಕ್ಕದ್ದೆನ್ನೆಲ್ಲ ನಾಶ ಮಾಡಿ ರೈತರನ್ನ ನಿದ್ದೆಗೆಡುಸುತ್ತಿವೆ.
ರೈತರಿಗೆ ಸೂಚನೆ :
ಗ್ರಾಮಗಳಲ್ಲಿ ಕರಡಿ ಚಿರತೆ, ಮತ್ತಿರ ಪ್ರಾಣಿಗಳು ಪ್ರತ್ಯಕ್ಷವಾಗುತ್ತಿದ್ದು, ಅರಣ್ಯ ಸಿಬ್ಬಂದಿಗಳನ್ನ ರಾತ್ರಿ ಸಮಯದಲ್ಲಿ ಗಸ್ತು ಮಾಡಲು ಸೂಚಿಸಲಾಗಿದೆ. ರೈತರ ಬೆಳೆಗಳು ಕಾಳುಕಟ್ಟು ಹಂದಲಲ್ಲಿ ಕಾಡು ಹಂದಿಗಳು ದಾಳಿ ಮಾಡುತ್ತಿರುವುದು ಸಹಜ. ಕಾಡು ಹಂದಿಗಳಿಂದ ಬೆಳೆ ನಾಶವಾದ ಸಂದರ್ಭದಲ್ಲಿ ರೈತರು ಅದರ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಬೆಳೆ ಪರಿಹಾರಕ್ಕಾಗಿ ಉನ್ನತ ಅಧಿಕಾರಿಗಳಿಗೆ ಸಿಫಾರಸ್ಸು ಮಾಡಲಾಗುವುದು ಎಂದು ಅರಣ್ಯ ವಲಯ ಅಧಿಕಾರಿ ಸೋಮಶೇಖರ್ ಅವರು ತಿಳಿಸಿದರು.