ಬೆಳೆ ಅಭಿವೃದ್ಧಿ ಹಾಗೂ ಬೆಳೆ ಸುರಕ್ಷತಾ ಅಭಿಯಾನ


ಮುನವಳ್ಳಿ,ಜ.22: ಸಮೀಪದ ಹಣಮಸಾಗರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಜುವಾರಿ ಫಾರ್ಮ್ ಹಬ್ ಲಿಮಿಟೇಡ್ ಕಟಕೋಳ ಇವರ ಸಹಯೋಗದಲ್ಲಿ ಜ. 20 ರಂದು ಹಮ್ಮಿಕೊಂಡ ಬೆಳೆ ಅಭಿವೃದ್ಧಿ ಅಭಿಯಾನ ಹಾಗೂ ಬೆಳೆ ಸುರಕ್ಷತಾ ಅಭಿಯಾನವನ್ನು ಝಡ್ ಎಫ್ ಎಚ್ ಎಲ್ ಮಾರ್ಕೇಟಿಂಗ್ ಮಾನ್ಯೇಜರ ರವೀಂದ್ರ ಬಿ.ಎನ್. ಉದ್ಘಾಟಿಸಿದರು. ಜುವಾರಿ ಜಂಕ್ಷನನಲ್ಲಿ ರೈತರಿಗೆ ಸಿಗುವ ರಸಗೊಬ್ಬರ, ಕ್ರಿಮಿನಾಶಕಗಳ ವಿಶೇಷ ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಸಾವಯಇಂಗಾಲ ,ಮಣ್ಣಿನ ರಸಸಾರ, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆಯ ಮಾಡುವುದರಿಂದ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಬಹುದೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಕೈಷಿ ಸಂಶೋಧನಾ ಕೇಂದ್ರ ಸಂಕೇಶ್ವರದ ಕೈಷಿ ವಿಜ್ಞಾನಿ ಡಾ. ಎಸ್.ಎಸ್. ನೂಲಿ ಮಾತನಾಡಿ ಕಬ್ಬಿನ ಪರಿಣಾಮಕಾರಿ ತಳಿಗಳನ್ನು ಉಪಯೋಗಿಸಿ, ಸಾವಯವ ಗೊಬ್ಬರ ಬಳಸಿ ಅಧಿಕ ಇಳುವರಿ ತಗೆಯಬಹುದು ಹಾಗೂ ರಸಗೊಬ್ಬರಗಳ ಸಮತೋಲಿತ ಬಳಕೆ ಮತ್ತು ವಿವಿಧ ರೋಗಗಳ ಹತೋಟಿ ಕ್ರಮಗಳ ಕುರಿತು ತಿಳಿಸಿದರು.
ಅಧ್ಯಕ್ಷತೆಯನ್ನು ಪ್ರಗತಿಪರ ರೈತ ಗಾಂಧಿ ತುಪ್ಪದ ವಹಿಸಿದ್ದರು. ಬಾಗಲಕೋಟ ಕ್ಷೇತ್ರ ವ್ಯವಸ್ಥಾಪಕ ಚೇತನ ಪಾಟೀಲ, ಬೆಳಗಾವಿ ಕ್ಷೇತ್ರ ವ್ಯವಸ್ಥಾಪಕ ಅಡಿವೇಪ್ಪ ಕುಂದರಗಿ, ಈಶ್ವರ ಹಗೇದ , ವಿಠ್ಠಲ ಮೇಟಿ, ನಿಂಗಪ್ಪ ಹಳ್ಳೂರ ಹಾಗೂ ರೈತರು ಉಪಸ್ಥಿತರಿದ್ದರು.