ಬೆಳೆಹಾನಿ ಪ್ರಸ್ತಾವನೆ:ಖಾಲಿಫಾರಂಗೆ ಸಹಿ ಮಾಡದಿರಲು ಮನವಿ

ಚಿಂಚೋಳಿ ಸೆ 18: ತಾಲೂಕಿನ ರೈತರ ಜಮೀನಿನಲ್ಲಿ ಬೆಳೆ ವಿಮಾ ಕಂಪನಿಯ ಪ್ರತಿನಿಧಿಗಳು ಬೆಳೆ ಸಮೀಕ್ಷೆ ಮಾಡುವಾಗ ವಾಸ್ತವವಾಗಿ ಆಗಿರುವ ಬೆಳೆ ಹಾನಿಯನ್ನು ನಿಖರವಾಗಿ ಪ್ರಸ್ತಾವನೆ ಫಾರಂನಲ್ಲಿ ನಮೂದಿಸಿರುವ ಬಗ್ಗೆ ಖಾತರಿ ಪಡಿಸಿಕೊಂಡ ಮೇಲೆ ರೈತರು ತಮ್ಮ ಸಹಿ ಮಾಡಬೇಕೆಂದು ಚಿಂಚೋಳಿ ತಾಲೂಕ ಕೃಷಿ ಸಹಾಯಕ ನಿರ್ದೇಶಕವೀರಶೆಟ್ಟಿ ರಾಠೋಡ, ಅವರು ಮನವಿ ಮಾಡಿದ್ದಾರೆ.
ರೈತರು ಪ್ರಸ್ತಾವನೆ ಫಾರಂ (ಪೆÇ್ರಪೆÇಸಲ್ ಫಾರಂ) ನಲ್ಲಿ ಬೆಳೆಹಾನಿಯಾದ ಯಾವುದೆ ವಿವರಗಳನ್ನು ಭರ್ತಿ ಮಾಡದೆ ಖಾಲಿ ಇರುವ ಫಾರಂ ಮೇಲೆ ಸಹಿ ಮಾಡುತ್ತಿರುವುದು ಕಂಡುಬಂದಿರುತ್ತದೆ. ಖಾಲಿ ಪ್ರಸ್ತಾವನೆ ಫಾರಂ ಮೇಲೆ ರೈತರು ಸಹಿ ಮಾಡಿದ್ದಲ್ಲಿ ವಿಮಾ ಕಂಪನಿಯ ಸಿಬ್ಬಂದಿಗಳು ಜಮೀನನಲ್ಲಿ ವಾಸ್ತವವಾಗಿ ಆಗಿರುವ ಬೆಳೆ ಹಾನಿಗಿಂತಲು ಕಡಿಮೆ ಕ್ಷೇತ್ರ ಮತ್ತು ಕಡಿಮೆ ಪ್ರತಿಶತ ಹಾನಿಯನ್ನು ವರದಿ ಮಾಡುವ ಸಂಭವವಿರುತ್ತದೆ ಎಂದು ಅವರು ತಿಳಿಸಿದ್ದಾರೆ.