ಬೆಳೆಹಾನಿ: ಪರಿಹಾರಕ್ಕೆ ಆಗ್ರಹ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು16: ತೀವ್ರ ಮಳೆ ಕೊರತೆಯಿಂದ ಲಕ್ಷ್ಮೇಶ್ವರ ಶಿರಹಟ್ಟಿ ಮುಂಡರಗಿ ತಾಲೂಕು ಸಂಪೂರ್ಣ ಕೃಷಿ ವಿಫಲಗೊಂಡಿದ್ದು ಮುಂಗಾರು ಬೆಳೆಯನ್ನು ರೈತರು ಕಳೆದುಕೊಂಡಿದ್ದಾರೆ.
ಪ್ರಾರಂಭದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ ರೈತರು ದುಬಾರಿ ಬೀಜ ಗೊಬ್ಬರ ಆಳಿನ ಪ್ರಕಾರ ಹೀಗೆ ಭಾರಿ ನಷ್ಟವನ್ನು ಅನುಭವಿಸಿದ್ದಾನೆ ಮತ್ತೆ ಕೃಷ ಭೂಮಿ ಸಜ್ಜು ಮಾಡಿಕೊಂಡು ಹಿಂಗಾರಿ ಬಿತ್ತನೆಗೆ ಮುಖ ಮಾಡಬೇಕಾಗಿದೆ.
ಸರ್ಕಾರ ಈ ಭಾಗದ ರೈತರಿಗೆ ಗೊಬ್ಬರ ಬೀಜ ಖರಿಧಿಗೆ ಎಕರೆಗೆ ಕನಿಷ್ಠ 5000 ರೂಪಾಯಿ ಯಂತೆ 5 ಎಕರೆಯ ತನಕ ಬಿತ್ತನೆಗೆ ಸಹಾಯಧನ ನೀಡಬೇಕು.
ರೈತರಿಗೆ ತಕ್ಷಣ ಆರ್ಥಿಕ ಸಹಾಯ ನೀಡದಿದ್ದರೆ ದನಕರುಗಳಿಗೂ ಆಹಾರ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಆದ್ದರಿಂದ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ಗದಗ ಜಿಲ್ಲೆಯ ಭಾರತೀಯ ಜನತಾ ಪಾರ್ಟಿ ಕೋಶ್ಯಾಧ್ಯಕ್ಷರಾದ ನಾಗರಾಜ್ ಕುಲಕರ್ಣಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.