ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ, ಆ 4: ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಸಾವಿರಾರು ಎಕರೆ ಪ್ರದೇಶದಲ್ಲಿನ ಹೆಸರು, ಹತ್ತಿ, ಮೆಕ್ಕೆಜೋಳ
ಸತತ ಮಳೆಯಿಂದಾಗಿ ಸಂಪೂರ್ಣ ಹಾನಿಗಿಡಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಬೆಳೆಹಾನಿ ಪರಿಹಾರ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಶೇ. 90 ರಷ್ಟು ಬೆಳೆ ಹಾನಿಗೀಡಾಗಿದ್ದು ಈಗಾಗಲೇ ಕೃಷಿ ಇಲಾಖೆಯವರು ಸಮೀಕ್ಷೆ ಮಾಡಿದ್ದು, ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಈ ಕೂಡಲೇ ಬೆಳೆಹಾನಿ ನೀಡಬೇಕೆಂದು ರೈತರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾವರೆಪ್ಪಾ ಲಮಾಣಿ, ನೇಮಪ್ಪ ಲಮಾಣಿ, ಪರಸಪ್ಪ ಲಮಾಣಿ, ರಮೇಶ್ ಲಮಾಣಿ, ಚೆನ್ನಬಸಪ್ಪ ಉಮಚಗಿ, ಮೊಹಮ್ಮದ್ ಸಾಬ್ ದೊಡಮನಿ, ಚಂದ್ರು ಲಮಾಣಿ, ಗೋವಿಂದಪ್ಪ ಲಮಾಣಿ, ಮಾನಪ್ಪ ಲಮಾಣಿ, ಮಾಂತೇಶ ಲಮಾಣಿ, ದೇವಪ್ಪ ಮಾಳ್ಗಿಮನಿ ಸೇರಿದಂತೆ ಮತ್ತಿತರರಿದ್ದರು.