ಬೆಳೆಹಾನಿ ಪರಿಶೀಲಿಸಿದ ಶಾಸಕ ನಾಗೇಂದ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 25 :  ಅತಿಯಾದ, ಅಕಾಲಿಕ ಮಳೆಯಿಂದ  ಹಾನಿಗೊಳಗಾಗಿರುವ ವಿವಿಧ ಬೆಳೆಯ ಪ್ರದೇಶಕ್ಕೆ ನಿನ್ನೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ. ಭೇಟಿ ನೀಡಿ ಪರಿಶೀಲಿಸಿ ಬೆಳೆನಷ್ಟದ ಬಗ್ಗೆ ರೈತರೊಡನೆ ಸಮಾಲೋಚನೆ ನಡೆಸಿದರು.
ತಾಲೂಕಿನ ಬ್ಯಾಲಚಿಂತೆ, ಜಿ.ನಾಗೇನಹಳ್ಳಿ, ಕಾರೆಕಲ್ಲು  ಸಿಡಿಗಿನಮೊಳ ಮೊದಲಾದ  ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ರೈತರು ಬೆಳೆದಿದ್ದ ಕಡಲೆ, ಮೆಣಸಿನಕಾಯಿ, ಭತ್ತ ಹತ್ತಿ ಮೊದಲಾದ ಬೆಳೆಗಳು ಮಳೆಯಿಂದಾಗಿ ಹಾಳಾಗಿರುವದನ್ನು ಕಂಡು ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಶೆ ನೀಡಿದರು.
ಮೆಣಸಿನಕಾಯಿ ಬೆಳೆಗೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ ತಂದು ನಂತರ ಸಾವಿರಾರು ರೂಪಾಯಿ ವೆಚ್ಚದಲ್ಲಿ ರಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸಿದ್ದು ಎಕರೆಗೆ ಒಂದು‌ಲಕ್ಷ ರೂಗಳಿಗೂ ಹೆಚ್ಚು ನಷ್ಟವಾಗಿದೆ. ಸರ್ಕಾರ ಎಕರೆಗೆ ಒಂದು ಲಕ್ಷ ರೂ ಪರಿಹಾರ ನೀಡಬೇಕೆಂದು ತಾವು ಮುಖ್ಯ ಮಂತ್ರಿಗಳನ್ನು ಒತ್ತಾಯಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಆಯಾ ಗ್ರಾಮದ ಮುಖಂಡರು ಇದ್ದರು